ದಸರಾ: ಶ್ವಾನ ‘ಗೋಪಿ’ ಜೊತೆ ಪಾಲ್ಗೊಂಡ ಸುಧಾ ಮೂರ್ತಿ

Spread the love

ಮೈಸೂರು: ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಇಲ್ಲಿನ ಜೆ.ಕೆ. ಮೈದಾನದಲ್ಲಿ ಭಾನುವಾರ ನಡೆದ ‘ಮುದ್ದುಪ್ರಾಣಿಗಳ ಪ್ರದರ್ಶನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾವು ಸಾಕು ನಾಯಿ ‘ಗೋಪಿ’ಯೊಂದಿಗೆ ಪಾಲ್ಗೊಂಡು ಗಮನಸೆಳೆದರು.

‘ಗೋಪಿ’ಯ ದಿನಚರಿಯನ್ನು ಪರಿಚಯಿಸಿ ಅದನ್ನು ಮುದ್ದಾಡಿದರು.

ಅದು ಕೂಡ ಸುಧಾ ಅವರಿಗೆ ಮುತ್ತು ನೀಡಿತು.

‘ಮುದ್ದು ಪ್ರಾಣಿಗಳು ಮಕ್ಕಳಿದ್ದಂತೆ. ಅವುಗಳನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು. ಇಂತಹ ಪ್ರದರ್ಶನಗಳಿಂದ ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಪ್ರೀತಿ ಹೆಚ್ಚಾಗುತ್ತದೆ; ಬೀದಿ ನಾಯಿಗಳಿಗೆ ಆಹಾರ ಕೊಡಬೇಕು ಎಂಬ ಮನೋಭಾವ ಬೆಳೆಯುತ್ತದೆ’ ಎಂದರು.

ಈ ವೇಳೆ, ರೈತ ದಸರಾ ಉಪಸಮಿತಿಯಿಂದ ‘ಗೋಪಿ’ಗೂ ಗೌರವ ಸಂದಿತು.


Spread the love

About Laxminews 24x7

Check Also

ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ

Spread the loveಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ 90 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ