ಮುಂಬೈ: ಅಪ್ರಾಪ್ತನೋರ್ವ ಯೂಟ್ಯೂಬ್ ವಿಡಿಯೋ ನೋಡಿ ಕೆಫೆಯ ಪೇಮೆಂಟ್ ಸಿಸ್ಟಮ್ ಹ್ಯಾಕ್ ಮಾಡಿದ್ದು, ಗ್ರಾಹಕರು ಕೆಫೆಗೆ ಪಾವತಿಸುವ ಹಣವನ್ನು ತನ್ನ ಖಾತೆಗೆ ಬರುವಂತೆ ಮಾಡುತ್ತಿದ್ದ ಪ್ರಕರಣ ಮುಂಬೈನಲ್ಲಿ ನಡೆದಿದೆ.
17 ವರ್ಷದ ವಿದ್ಯಾರ್ಥಿ ಯೂಟ್ಯೂಬ್ ವಿಡಿಯೋ ನೋಡಿ ಈ ಕೃತ್ಯ ಎಸಗಿದ್ದು, ಬಾಲಾಪರಾಧಿ ನ್ಯಾಯಾಲಯ ಎರಡು ವರ್ಷಗಳ ಕಾಲ ಕೌನ್ಸಲಿಂಗ್‍ಗೆ ಒಳಪಡಿಸುವಂತೆ ಸೂಚಿಸಿದೆ. ವಿದ್ಯಾರ್ಥಿ 12ನೇ ತರಗತಿಯಲ್ಲಿ ಶೇ.80ರಷ್ಟು ಅಂಕ ಗಳಿಸಿ ಉತ್ತೀರ್ಣನಾದ ಬಳಿಕ ಚಾರ್ಟೆಡ್ ಅಕೌಂಟೆನ್ಸಿ ಮಾಡುತ್ತಿದ್ದಾನೆ. ಸೆಪ್ಟೆಂಬರ್ 28ರಂದು ಕಾಫೀ ಶಾಪ್ ಮಾಲೀಕ ಸೈಬರ್ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ..ಕಾಫಿ ಕುಡಿದ ಬಳಿಕ ಶಾಪ್‍ನಿಂದ ಗ್ರಾಹಕರಿಗೆ ಮೆಂಬರ್‍ಶಿಪ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಬಳಸಿ ಗ್ರಾಹಕರು ಏನಾದರೂ ಕೊಳ್ಳಬಹುದು, ಇಲ್ಲವೆ ರಿವಾರ್ಡ್ ಪಡೆಯಬಹುದಾಗಿದೆ. ಕಾರ್ಡ್ ಬಳಸದಿದ್ದರೂ ಹಣ ಖಾಲಿಯಾಗಿರುವುದನ್ನು ಕಂಡ ಗ್ರಾಹಕರು ಕಾಫೀ ಶಾಪ್ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಬಳಿಕ ಮಾಲೀಕ ತನ್ನ ಪೇಮೆಂಟ್ ಸಿಸ್ಟಮ್ ಪರಿಶೀಲಿಸಿದ್ದಾರೆ. ಅಲ್ಲದೆ ಇತರ ಗ್ರಾಹಕರನ್ನು ವಿಚಾರಿಸಿದ್ದಾರೆ. ಅವರೂ ಸಹ ಇದೇ ರೀತಿಯ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಬಳಿಕ ಮಾಲೀಕ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.