ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy Case) ಜೈಲಿನಲ್ಲಿರುವ ನಟ ದರ್ಶನ್(Actor Darshan) ಅವರ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ಮತ್ತೆ (ಅ.5ರಂದು) ನಡೆದಿದೆ.
57ನೇ ಸಿಸಿಹೆಚ್ ಕೋರ್ಟಿನಲ್ಲಿ ದರ್ಶನ್ ಪರ ವಕೀಲ ಹಿರಿಯ ವಕೀಲರಾದ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ.

ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಯ ಜಾಮೀನು ಅರ್ಜಿ ವಿಚಾರಣೆ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆಯುತ್ತಿದೆ. ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದ್ದು ಹಲವು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ದರ್ಶನ್ ಪರ ವಕೀಲರ ವಾದದಲ್ಲಿ ಏನಿದೆ?:
ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್‌ನ ಅಂಶಗಳನ್ನು ಉಲ್ಲೇಖಿಸಿ ನಾಗೇಶ್ ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ದರ್ಶನ್ ವಿರುದ್ಧ ನೀಡಿರುವ ಸಾಕ್ಷಿಗಳು ಸೂಕ್ತವಾಗಿಲ್ಲ. ಪಂಚನಾಮೆಯಲ್ಲಿ ರಕ್ತದ ಕಲೆ ಇದೆ ಎಂದಿದ್ದಾರೆ. ಆದರೆ ಎಫ್ ಎಸ್ ಎಲ್ ವರದಿಯಲ್ಲಿ ರಕ್ತದ ಕಲೆಯೇ ಇಲ್ಲ ಎಂದಿದೆ. ಹಾಗಿದ್ರೆ ಯಾರು ಇಲ್ಲಿ ಸಾಕ್ಷಿಗಳನ್ನು ಪ್ಲಾಂಟ್ ಮಾಡಿದ್ದು? ಇಂತಹ ಸಾಕ್ಷಿಗಳ ಸೃಷ್ಟಿಗೂ ಮಿತಿ ಇರಬೇಕು. ಇಲ್ಲಿ ನ್ಯಾಯದ ಕಗ್ಗೊಲೆಯಾಗಿದೆ ಎಂದು ತನ್ನ ವಾದದಲ್ಲಿ ನಾಗೇಶ್ ಉಲ್ಲೇಖಿಸಿದ್ದಾರೆ.
Laxmi News 24×7