ಬೈಲಹೊಂಗಲ: ತಾಲೂಕಿನ ಹಳೇ ಜಾಲಿಕೊಪ್ಪ ಗ್ರಾಮದ ಮಲಪ್ರಭಾ ನದಿ ಸಮೀಪ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ತುರಮರಿ ಗ್ರಾಮದ ರಾಮನಿಂಗ ಫಕೀರಪ್ಪ ಶಿಂಗಾಡಿ (40) ಮೃತ ವ್ಯಕ್ತಿ.
ಬೈಕ್ ಸವಾರ ಬೈಲಹೊಂಗಲದಿಂದ ತುರಮರಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ಬೆಳಗಾವಿ ಘಟಕಕ್ಕೆ ಸೇರಿದ ಸಾರಿಗೆ ಬಸ್ ಯಲ್ಲಮ್ಮನಗುಡ್ಡದಿಂದ ಬೈಲಹೊಂಗಲ ಕಡೆ ಬರುವಾಗ ಮಲಪ್ರಭಾ ನದಿ ಬಳಿ ಈ ದುರ್ಘಟನೆ ಸಂಭವಿಸಿದೆ.
ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಬಸ್ ಮುಂಭಾಗದಲ್ಲಿ ಸಿಲುಕಿತ್ತು.
ಸ್ಥಳಕ್ಕೆ ಡಿವೈ ಎಸ್ ಪಿ ರವಿ ನಾಯ್ಕ, ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್ ಐಎಫ್ ವೈ ಮಲ್ಲೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ ಸಾರ್ವಜನಿಕರು ಶವ ಸಾಗಿಸುವಲ್ಲಿ ನೇರವಾಗಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.
ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7