Breaking News

ಬ್ಯಾಡಗಿ: ಕಳ್ಳರ ಹಾವಳಿ ತಡೆಗೆ ಸ್ಥಳೀಯರ ಗಸ್ತು

Spread the love

ಬ್ಯಾಡಗಿ: ಪಟ್ಟಣದಲ್ಲಿ ಕಳೆದ ಐದಾರು ತಿಂಗಳಿಂದ ಕಳ್ಳತನದ ಪ್ರಕರಣ ನಡೆಯು ತ್ತಿದ್ದು, ಸ್ಟೇಶನ್‌ ರಸ್ತೆ ಬಳಿಯ ಪೋಲಿಸ್‌ ಸಿಬ್ಬಂದಿ ಮನೆ ಸೇರಿದಂತೆ ಸಂಗಮೇಶ್ವರ ನಗರದಲ್ಲಿ ಎರಡು ಮತ್ತು ಕಾಕೋಳ ರಸ್ತೆಯ ಸೋಮೇಶ್ವರ ನಗರದಲ್ಲಿ ಒಂದು ಮನೆ ಕಳ್ಳತನವಾಗಿದೆ.

ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆದಿವೆ.

ಹಗಲು ಹೊತ್ತಿನಲ್ಲಿಯೂ ಚಾಲಾಕಿ ಕಳ್ಳರು ಎರಡು ಮನೆಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಮಹಜೂರ ನಡೆಸಿದ್ದರೂ ಆರೋಪಿ ಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನೆಹರೂ ನಗರದ ಸಮಾನ ಮನಸ್ಕ ನಿವಾಸಿಗಳು ರಾತ್ರಿ ಗಸ್ತು ಆರಂಭಿಸುವ ಮೂಲಕ ಕಳ್ಳತನ ತಡೆಯಲು ಬ್ರೇಕ್‌ ಹಾಕಿದ್ದಾರೆ.

ಕಳೆದ 15 ದಿನಗಳಿಂದ ಗುಂಪು ಕಟ್ಟಿಕೊಂಡು ರಾತ್ರಿ 12ರಿಂದ 3 ಗಂಟೆಯವರೆಗೆ ಗಸ್ತು ಆರಂಭಿಸಿದ್ದಾರೆ. ಕಾರ್‌ ಮೂಲಕವೂ ಒಂದೊಂದು ರೌಂಡ್‌ ಹಾಕುವ ಗುಂಪು ಕಳ್ಳತನ ನಡೆಯದಂತೆ ನಿಗಾ ವಹಿಸಿದ್ದಾರೆ. ಹಗಲುಹೊತ್ತು ವಿವಿಧ ವಸ್ತುಗಳ ಮಾರಾಟದ ನೆಪದಲ್ಲಿ ಬರುವವವರ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. ಗುಂಪಾಗಿ ತಿರುಗುವ ನಾವು ನಮ್ಮ ವಾರ್ಡ್‌ನಲ್ಲಿ ಯಾವುದೇ ಕಳ್ಳತನವಾಗದಂತೆ ತಡೆಯುವ ಪ್ರಯತ್ನ ಮಾಡಿದ್ದೇವೆ.

ತಂಡದ ಸದಸ್ಯರು ಬೇರೆ ಕೆಲಸದಲ್ಲಿ ದ್ದಾಗ ಕಾರ್‌ ಹಾಗೂ ಬೈಕ್‌ ಮೂಲಕವೂ ಒಂಡೆರಡು ರೌಂಡ್‌ ಹಾಕಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸ ಲಾಗುತ್ತಿದೆ ಎಂದು ಕಿರಣಕುಮಾರ ಎಂ.ಎಲ್‌ ಮಾಹಿತಿ ನೀಡಿದರು.

ದುಡಿದು ಸಂಪಾದಿಸಿದ ಹಣ, ಮಕ್ಕಳ ಮದುವೆ, ಮುಂಜಿಗೋ ಕೂಡಿಟ್ಟ ಚಿನ್ನಾಭರಣಗಳು ಕಳ್ಳರ ಪಾಲಾದರೆ ಜೀವನ ಸಾಗಿಸುವುದಾ ದರೂ ಹೇಗೆ ಎನ್ನುವ ಚೀಂತೆ ಕಾಡು ತ್ತಿದೆ. ಮನೆ ಬಾಗಿಲು ಹಾಕಿಕೊಂಡು ಏನಾದರೊಂದು ಕೆಲಸದ ನಿಮಿತ್ತ ಹೋಗಬೇಕಾಗುತ್ತದೆ. ಇಂತಹ ವೇಳೆ ಕಳ್ಳರು ನುಗ್ಗಿ ಕೂಡಿಟ್ಟಿದ್ದನ್ನು ದೋಚಿಕೊಂಡು ಹೋಗುವ ಚಿಂತೆ ಕಾಡುತ್ತಿದೆ. ಹೀಗಾಗಿ ನಾವೆಲ್ಲ ಪಾಳಿ ಮೇಲೆ ಗಸ್ತು ತಿರುಗಿ ಕಳ್ಳತನವಾಗದಂತೆ ಜಾಗೃತಿ ವಹಿಸುತ್ತಿದ್ದೇವೆ. ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದ್ದಾರೆ.

ಕಳ್ಳರ ಕಾಟ, ಕರಪತ್ರ ಹಂಚಿ ಜಾಗೃತಿ: ‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಳ್ಳರ ಬೇಟೆಗೆ ತಂಡ ರಚಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆದಿದ್ದು, ನಾವೂ ಸಹ ನಗರದಲ್ಲಿ ಗಸ್ತು ಆರಂಭಿಸಿ, ಸೈರನ್‌ ಮೂಲಕ ಜನರನ್ನು ಜಾಗೃತ ಗೊಳಿಸಲಾಗುತ್ತಿದ್ದೇವೆ. ಕರ ಪತ್ರಗಳನ್ನು ಹಂಚಿ ಸಾರ್ವಜನಿಕರು ಜಾಗೃತರಾಗಲು ತಿಳಿಸಿದ್ದು, ಮನೆಯ ಮುಂದೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ. ಊರಿಗೆ ಹೋಗು ವಾದ ಅಕ್ಕಪಕ್ಕದವರಿಗೆ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ. ಒಟ್ಟಾರೆ ಕಳ್ಳರನ್ನು ಹಿಡಿಯಲು ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದೆ’ ಎಂದು ಸಿಪಿಐ ಮಹಾಂತೇಶ ಕಂಬಿ ಹೇಳಿದರು.


Spread the love

About Laxminews 24x7

Check Also

ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ (

Spread the loveಬೆಂಗಳೂರು, ಜುಲೈ 1: ‘ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ (BR Patil) ಆಡಿದ್ದ ಅಬ್ಬರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ