ನಿಪ್ಪಾಣಿ: ‘ತಾಂತ್ರಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿಭಾವಂತ ಮಾನವಶಕ್ತಿ ಕೇವಲ ಭಾರತದಲ್ಲಿ ಮಾತ್ರ ಇರುವುದರಿಂದ ಇಡಿ ವಿಶ್ವವು ಭಾರತವನ್ನು ಬಹು ನಿರೀಕ್ಷೆಯಿಂದ ಗಮನಿಸುತ್ತಿದೆ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಯಾರಿಸುವ ಕಾರ್ಯ ಕೆ.ಎಲ್.ಇ.ಯಂತಹ ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿ ಮಾಡುತ್ತಿವೆ’ ಎಂದು ಕೇಂದ್ರ ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತೀನ ಗಡ್ಕರಿ ಹೇಳಿದರು.
ನಿಪ್ಪಾಣಿಯ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಡಾ. ಪ್ರಭಾಕರ ಕೋರೆ ನಾಗರಿಕ ಗೌರವ ಸತ್ಕಾರ ಮತ್ತು ಎಂಬಿಎ-ಎಂಸಿಎ ಮಹಾವಿದ್ಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘₹ 22 ಲಕ್ಷ ಕೋಟಿ ಮೌಲ್ಯದ ಪೆಟ್ರೋಲ್, ಡೀಸಲ್ ಮತ್ತು ಗ್ಯಾಸ್ ಆಮದು ಮಾಡಿಕೊಳ್ಳುತ್ತೇವೆ. ಇದರಲ್ಲಿ ₹ 10 ಲಕ್ಷ ಕೋಟಿ ಇಥೆನಾಲ್ ಮೂಲಕ ಉಳಿಸಿದಲ್ಲಿ ದೇಶದ ಪ್ರತಿಯೊಬ್ಬ ರೈತ ಸಮೃದ್ಧರಾಗುತ್ತಾರೆ. ಸ್ಮಾರ್ಟ್ ಸಿಟಿಯೊಂದಿಗೆ ಸ್ಮಾರ್ಟ್ ಹಳ್ಳಿಗಳಾಗಲು ಸಮಯ ತಗಲುವುದಿಲ್ಲ. ಇಥೆನಾಲ್ ಉತ್ಪಾದನೆಯಿಂದ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ’ ಎಂದರು.
Laxmi News 24×7