ಚನ್ನಪಟ್ಟಣ ಉಪಚುನಾವಣೆಗೆ 50 ಕೋಟಿ ರೂಪಾಯಿ ಕೊಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ ಎಂದು ಉದ್ಯಮಿ ವಿಜಯ್ ತಾತಾ ದೂರು ನೀಡಿದ್ದಾರೆ. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದ್ದು, ಕಾಂಗ್ರೆಸ್ ಈ ವಿಚಾರವಾಗಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಬಗ್ಗ ಟ್ವೀಟ್ ಮಾಡಿರುವ ಕಾಂಗ್ರೆಸ್ ‘ರೋಲ್ಕಾಲ್swamy ಅವರ ದಾಹಗಳಿಗೆ ಮಿತಿ ಇಲ್ಲ. ಅಧಿಕಾರ ದಾಹ, ಭೂ ದಾಹ, ಹಣ ದಾಹಗಳಿಗೆ ಹಲವು ನಿದರ್ಶನಗಳಿವೆ. ಗಂಗೇನಹಳ್ಳಿಯ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಭೂದಾಹ ಬಯಲಾಗಿದ್ದರೆ, ಗಣಿ ಹಗರಣ ಹಾಗೂ ₹50 ಕೋಟಿ ರೋಲ್ಕಾಲ್ ಹಗರಣದಿಂದ ಹಣದಾಹ ಹೊರಬಂದಿದೆ’ ಎಂದು ಕುಟುಕಿದೆ.
‘ಸಿದ್ಧಾಂತದ ಜೊತೆಗೆ ನಾಲಿಗೆಯನ್ನೂ ಕಾಲಕ್ಕೆ ತಕ್ಕಂತೆ ತಿರುಗಿಸುವ ರೋಲ್ಕಾಲ್ ಸ್ವಾಮಿಯವರ ಅಧಿಕಾರ ದಾಹ ಎಂತದ್ದು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಸೂಟ್ಕೇಸ್ ಸ್ವಾಮಿಗಳು ಕರ್ನಾಟಕದ ರಾಜಕಾರಣದಲ್ಲಿ ಬೃಹನ್ನಳೆ ಪಾತ್ರವಹಿಸಿರುವುದು ದುರಂತ’ ಎಂದು ಲೇವಡಿ ಕೂಡ ಮಾಡಿದೆ.
Laxmi News 24×7