ವೀರಮಾರುತಿ ನಗರ: ಶೌಚಕ್ಕೆ ಬಯಲೇ ಗತಿ
ಹುಬ್ಬಳ್ಳಿ: ‘ಮನೆಯೊಳಗ ಪಾಯಿಖಾನಿ ಕಟ್ಟಿಕೊಳ್ಳಾಕ ಜಾಗ ಇಲ್ಲ, ಮನಿ ಸಮೀಪದಾಗ ಇದ್ದ ಪಬ್ಲಿಕ್ ಪಾಯಿಖಾನಿ ಬಂದ್ ಆಗಿ 9 ವರ್ಷ ಆತು. ಹೊತ್ತ ಮುಳಗಿದ ಮ್ಯಾಲ, ಬೆಳಕ ಹರಿಯುವ ಮೊದಲ ಚರಂಡಿ ಪಕ್ಕ, ಗಿಡಗಂಟಿ ಮರೀಯಾಗ ಶೌಚಕ್ಕ ಹೋಗು ಪರಿಸ್ಥಿತಿ ಐತಿ. 67 ವರ್ಷದಾಕಿ ಅದೀನ್ರಿ.
ಸರಿಯಾಗಿ ನಡದ್ಯಾಡಾಕ ಬರ್ತಿಲ್ಲ. ಶೌಚಾಲಯ ಇಲ್ಲದ ಭಾರೀ ಸಮಸ್ಯೆ ಆಗೈತಿ. ಈ ತ್ರಾಸ ಯಾರ ಹತ್ರ ಹೇಳೂನ್ರಿ…
ಹೊಸೂರಿನ ವೀರಮಾರುತಿ ನಗರದ ವೃದ್ಧೆಯೊಬ್ಬರು ತಮ್ಮ ಅಳಲು ತೋಡಿಕೊಂಡರು. ಇದು ಇವರೊಬ್ಬರದ್ದೇ ನೋವಲ್ಲ. ಹಲವು ವರ್ಷಗಳು ಕಳೆದರೂ ಕನಿಷ್ಠ ಸೌಕರ್ಯಗಳೂ ಇಲ್ಲದೆ ಇಲ್ಲಿನ ಪ್ರತಿಯೊಬ್ಬ ನಿವಾಸಿಯೂ ಗೋಳಿಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಕುರಿತು ಭರವಸೆ ನೀಡಿ ಮಾಯವಾಗುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ಹುಬ್ಬಳ್ಳಿ ಅಭಿವೃದ್ಧಿಯತ್ತ ಸಾಗಿದರೂ ಹೊಸೂರಿನ ವೀರಮಾರುತಿ ನಗರ, ಗಿರಣಿಚಾಳ ಅಭಿವೃದ್ಧಿಯಿಂದ ವಂಚಿತವಾಗಿವೆ. ತೆರೆದ ಚರಂಡಿ, ಅನೈರ್ಮಲ್ಯ ವಾತಾವರಣದ ಮಧ್ಯೆಯೇ ಇಲ್ಲಿನ ಜನತೆ ಬದುಕು ಸಾಗಿಸುವಂತಾಗಿದೆ.
Laxmi News 24×7