ವಿಜಯಪುರ: ದ್ರಾಕ್ಷಿ ಬೆಳೆಯ ವಿಮೆ ತುಂಬಿದ ರೈತರಿಗೆ ಅವಧಿ ಮುಗಿದರೂ ಹಣ ಬಿಡುಗಡೆ ಆಗಿಲ್ಲ. ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ್ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಟಿ.ಭೂಬಾಲನ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ನಾಂದ್ರೇಕರ್ ಈಗಾಗಲೇ ನಮ್ಮ ನೆರೆ ಜಿಲ್ಲೆಯಾದ ಬೆಳಗಾವಿ ದ್ರಾಕ್ಷಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ₹1.80 ಲಕ್ಷ ಜಮೆಯಾಗಿದೆ. ಹವಾಮಾನ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಅದೆ ಮಾದರಿಯಲ್ಲಿರುವದರಿಂದ, ಈ ಜಿಲ್ಲೆಗಳಿಗೆ ಅದೇ ರೀತಿ ಹಣ ಸಂದಾಯವಾಗಬೇಕು. 2023 -24ರಲ್ಲಿ ರೈತರು ವಿಮೆ ತುಂಬಿದ ಹಣ ಜಮೆಯಾಗಬೇಕಾಗಿತ್ತು ಏಪ್ರಿಲ್ 31ಕ್ಕೆ ವಿಮಾ ಅವಧಿ ಮುಕ್ತಾಯವಾಗಿದ್ದು, 6 ತಿಂಗಳು ಕಳೆದರೂ ಹಣ ಜಮೆಯಾಗಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಹಣವನ್ನು ತ್ವರಿತವಾಗಿ ಜಮಾ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
Laxmi News 24×7