ಮಹಾರಾಷ್ಟ್ರದ ಪುಣೆಯಿಂದ ಏಳು ಜನ ಯುವಕರನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ತಂಡ, ಬಳಿಕ ಸಿಂಧನೂರು ತಾಲ್ಲೂಕಿನ ಕುನ್ನಟಗಿ ಗ್ರಾಮದ ಮನೆಯಲ್ಲಿಟ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಈ ಹಿನ್ನಲೆ ರಾಯಚೂರು ಹಾಗೂ ಮಹಾರಾಷ್ಟ್ರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಕಿಡ್ನಾಪರ್ಸ್ಗಳನ್ನು ವಶಕ್ಕೆ ಪಡೆದು ನಾಲ್ವರು ಯುವಕರನ್ನ ರಕ್ಷಣೆ ಮಾಡಿದ್ದಾರೆ.
ರಾಯಚೂರು, ಅ.01: ರಾಯಚೂರು ಹಾಗೂ ಮಹಾರಾಷ್ಟ್ರಪೊಲೀಸರು ಜಂಟಿ ಕಾರ್ಯಾಚರಣೆನಡೆಸಿ ಇಬ್ಬರು ಕಿಡ್ನಾಪರ್ಸ್ಗಳನ್ನು ವಶಕ್ಕೆ ಪಡೆದು ನಾಲ್ವರು ಯುವಕರನ್ನ ರಕ್ಷಣೆ ಮಾಡಿದ್ದಾರೆ. ಜಿಲ್ಲೆಯ ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದ ಮನೆಯೊಂದರಲ್ಲಿ ಯುವಕರನ್ನು ಕೂಡಿಟ್ಟಿದ್ದ ಆರೋಪಿಗಳಾದ ರಾಮು ಹಾಗೂ ದತ್ತು ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಸ್ವಪಲ್(23),ಶೂಬಮ್(22),ಗಜಾನನ(22) ಹಾಗೂ ಓಕಾಂರ(20) ರಕ್ಷಣೆಗೊಳಗಾದ ಯುವಕರು.
ಏಳು ಜನ ಯುವಕರನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ತಂಡ
ಮಹಾರಾಷ್ಟ್ರದ ಪುಣೆಯಿಂದ ಏಳು ಜನ ಯುವಕರನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ತಂಡ, ಬಳಿಕ ಸಿಂಧನೂರು ತಾಲ್ಲೂಕಿನ ಕುನ್ನಟಗಿ ಗ್ರಾಮದ ಮನೆಯಲ್ಲಿಟ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಈ ಹಿನ್ನಲೆ ಮೊಬೈಲ್ ನೆಟ್ವರ್ಕ್ ಆಧರಿಸಿ ಖಾಕಿ ಪಡೆ ಕುನ್ನಟಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟಿತ್ತು. ಈ ವೇಳೆ ಪೊಲೀಸರಿಗೆ ಗನ್ ತೋರಿಸಿ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಇದೇ ಗ್ಯಾಂಗ್ನಿಂದ ಅಪಹರಣಕ್ಕೊಳಗಾದ ಉಳಿದ ಮೂವರು ಯುವಕರಿಗಾಗಿ ಮಹಾರಾಷ್ಟ್ರ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.