ಬೆಂಗಳೂರು, ಅಕ್ಟೋಬರ್ 01: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ವುಡ್ ನಟ ದರ್ಶನ್ ಅವರ ಬಿಡುಗಡೆ ಯಾವಾಗ ಎಂದು ಜಾತಕ ಪಕ್ಷಿಯಂತೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ.
ಈಗಾಗಲೇ ದರ್ಶನ್ ಅವರ ಬಿಡುಗಡೆಗೆ ಪತ್ನಿ ಹಾಗೂ ದರ್ಶನ್ ಅವರ ಕುಟುಂಬಸ್ಥರು ಕಾನೂನು ಹೋರಾಟವನ್ನ ನಡೆಸಿದ್ರೆ, ಇತ್ತ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಬಿಡುಗಡೆಗೆ ಹರಕೆಯನ್ನ ಕಟ್ಟಿಕೊಂಡಿದ್ದಾರೆ. ಈ ನಡುವೆ ದರ್ಶನ್ ಬಿಡುಗಡೆಗೆ ಮಹೂರ್ತ ಫಿಕ್ಸ್ ಆಗಿದೆ ಎಂದು ಜ್ಯೋತಿಷಿ ಡಾ. ಲಕ್ಷ್ಮಿಕಾಂತ ಆಚಾರ್ಯ ಸ್ಟೋಟಕ ಭವಿಷ್ಯ ನುಡಿದಿದ್ದಾರೆ.
ತುಮಕೂರು ಹೊರವಲಯದ ಚಿನಗ ಗ್ರಾಮದಲ್ಲಿನ ಶ್ರೀ ಮೂಕಾಂಬಿಕಾ ದೇವಿ ಆರಾಧಕರು, ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಅವರ ಸ್ಟೋಟಕ ಹೇಳಿಕೆ ಈಗ ವೈರಲ್ ಆಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಿಂದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಅವರು ಹೇಳಿದ್ದಾರೆ. ಆಶ್ವೀಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ದರ್ಶನ್ ಬಿಡುಗಡೆ ಆಗ್ತಾರೆ ಎನ್ನಲಾಗಿದೆ. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದ್ದು, ದರ್ಶನ್ ರಾಜಕೀಯ ಜೀವನ ತುಂಬಾ ಚನ್ನಾಗಿರಲಿದೆ. ಆಶ್ವಿಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ದರ್ಶನ್ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.