Breaking News

ಸರಣಿ ಕಳ್ಳತನ ಪ್ರಕರಣ. ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ

Spread the love

ದಾಂಡೇಲಿ: ನಗರದ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿಗಳಾದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ ಘಟನೆ ಸೋಮವಾರ(ಸೆ. 30) ನಡೆದಿದೆ.

ಇದೇ ಸೆ: 19 ರಂದು ನಗರದ ಲಿಂಕ್ ರಸ್ತೆಯಲ್ಲಿರುವ ಅಭಿಷೇಕ್ ಕಾಳೆ ಮಾಲಕತ್ವದ ಮೆಡಿಕಲ್ ಅಂಗಡಿಯೊಳಗಿದ್ದ ನಗದು 4 ಲಕ್ಷ ರೂಪಾಯಿ ಮತ್ತು ಚಿನ್ನದ ಆಭರಣಗಳು, ಇದೇ ಕಟ್ಟಡದಲ್ಲಿರುವ ಪಕ್ಕದ ಶರಣ್.ಸಿ.ಅರಳಿಯವರ ಕಿರಾಣಿ ಅಂಗಡಿಯಿಂದ 5 ರಿಂದ 50 ಸಾವಿರ ರೂಪಾಯಿ ನಗದು, ಅಲ್ಲೇ ಹತ್ತಿರದಲ್ಲಿರುವ ವಿಷ್ಣು ಕಲಾಲ್ ಅವರು ನಡೆಸುತ್ತಿರುವ ಮೈಲಾರ ವೈನ್ ಸೆಂಟರಿನಿಂದ ಸರಿ ಸುಮಾರು 35 ಸಾವಿರ ನಗದು ಹಾಗೂ ವಿವಿಧ ಮದ್ಯದ ಬಾಟಲಿಗಳನ್ನು ಮತ್ತು ಮೈಲಾರ ವೈನ್ ಸೆಂಟರಿನ ಮುಂಭಾಗದಲ್ಲಿರುವ ಕಿರಣ್ ಕರಡಿ ಅವರ ಎಲ್ ಜಿ ಕಿರಾಣಿ ಅಂಗಡಿಗೆ ನುಗ್ಗಿ ರೂ : 2,000/- ನಗದನ್ನು ಕಳವು ಮಾಡಿದ್ದ ಪ್ರಕರಣ ದಾಖಲಾಗಿತ್ತು.

 

ಈ ಪ್ರಕರಣವನ್ನು ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ದಾಂಡೇಲಿಯ ಡಿವೈಎಸ್ಪಿಯವರ ಮಾರ್ಗದರ್ಶನದಡಿ ದಾಂಡೇಲಿಯ ಸಿಪಿಐ ಅವರ ನೇತೃತ್ವದಲ್ಲಿ ನಗರ ಠಾಣೆಯ ಪಿಎಸ್‌ಐ ಗಳು ಮತ್ತು ಪೊಲೀಸರ ತಂಡವೊಂದನ್ನು ರಚಿಸಿ ಪ್ರಕರಣವನ್ನು ಅತ್ಯಲ್ಪ ಅವಧಿಯಲ್ಲೆ ಭೇದಿಸಲಾಗಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್

Spread the love ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ