Breaking News

ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಬಳ್ಳಾರಿ ಎಂಟ್ರಿಗೆ ಸುಪ್ರೀಂ ಕೋರ್ಟ್​ ಅಸ್ತು

Spread the love

ಳ್ಳಾರಿ: ಗಣಿನಾಡು ಎಂದೇ ಪ್ರಖ್ಯಾತಿ ಹೊಂದಿರುವ ಬಳ್ಳಾರಿ (Bellary) ಜಿಲ್ಲೆಗೆ ಪ್ರವೇಶಿಸಲು ನಿಷೇಧ ಹೇರಲಾಗಿತ್ತು. ಕಳೆದ ಒಂದೂವರೆ ದಶಕಗಳಿಂದ ಬಳ್ಳಾರಿಯತ್ತ ಸುಳಿಯದ ಹಾಲಿ ಶಾಸಕ ಜರ್ನಾದನ ರೆಡ್ಡಿಗೆ (Janardhan Reddy) ಇದೀಗ ಸುಪ್ರೀಂ ಕೋರ್ಟ್​ ಬಿಗ್ ರಿಲೀಸ್ ನೀಡಿದ್ದು, ಜಿಲ್ಲೆಯೊಳಗೆ ಪ್ರವೇಶಿಸಲು ಅನುಮತಿ ನೀಡಿದೆ.

 

ಅಕ್ರಮ ಗಣಿಗಾರಿಕೆ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿದ್ದ ಜರ್ನಾದನ ರೆಡ್ಡಿಯನ್ನು 2011ರಲ್ಲಿ ಸಿಬಿಐ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆಂಧ್ರಪ್ರದೇಶದ ಚರ್ಲಪಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಜರ್ನಾದನ ರೆಡ್ಡಿಗೆ, ಅಕ್ರಮ ಗಣಿಗಾರಿಕೆ ಮಾಡಲಾದ ಅನಂತಪುರ, ಕರ್ನೂಲು ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಕಾರಣದಿಂದ ಕಳೆದ 13 ವರ್ಷಗಳಿಂದ ತಮ್ಮ ತವರು ಜಿಲ್ಲೆಗೆ ಕಾಲಿಡದ ಹಾಲಿ ಶಾಸಕರಿಗೆ ಇದೀಗ ಸುಪ್ರೀಂ ಕೋರ್ಟ್​ ಗ್ರೀನ್ ಸಿಗ್ನಲ್​ ಕೊಟ್ಟಿದ್ದು, ಜಿಲ್ಲೆಗೆ ಪ್ರವೇಶಿಸಬಹುದು ಎಂದು ತಿಳಿಸಿದೆ.

ತಮ್ಮ ಮಗಳ ವಿವಾಹ ಮಹೋತ್ಸವ ಮತ್ತು ಹೆರಿಗೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್​ನಿಂದ ಅನುಮತಿ ಕೋರಿದ್ದ ಜರ್ನಾದನ ರಡ್ಡಿ, ನ್ಯಾಯಾಲಯದ ಅನುಮತಿ ಮೇರೆಗೆ ತವರು ಬಳ್ಳಾರಿ ಜಿಲ್ಲೆಗೆ 10 ದಿನಗಳ ಕಾಲ ಆಗಮಿಸಿ, ವಾಸ್ತವ್ಯ ಹೂಡಿದ್ದರು.

ಈ ಪ್ರಕರಣದಲ್ಲಿ ಜರ್ನಾದನ ರೆಡ್ಡಿಗೆ ಸುಪ್ರೀಂ ಕೋರ್ಟ್​ ಬಿಗ್ ರಿಲೀಫ್​ ನೀಡುತ್ತಿದ್ದಂತೆ ಹಾಲಿ ಶಾಸಕನ ಅಭಿಮಾನಿಗಳು ನಗರದ ಮುಖ್ಯ ರಸ್ತೆ ಮತ್ತು ರೆಡ್ಡಿ ನಿವಾಸದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್

Spread the love ಕಾಂಗ್ರೆಸ್ ಸರ್ಕಾರ ಇಲ್ಲಿ ಲೂಟಿ ಮಾಡಿ ಬಿಹಾರ ಚುನಾವಣೆಗೆ ಹಣ ಕಳಿಸುತ್ತಿದ್ದಾರೆ : ಮಾಜಿ ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ