ಬೆಂಗಳೂರು: ಬಿಗ್ ಬಾಸ್ ಕನ್ನಡ (Big Boss Kannada-11) ಆರಂಭವಾಗಿದೆ. ಕಿಚ್ಚ ಸುದೀಪ್ (Kiccha Sudeep) ಸ್ಟೈಲಿಸ್ಟ್ ಆಗಿ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.
ನಿನ್ನೆ ಬಿಗ್ ಬಾಸ್ ಮನೆಯೊಳಗೆ ಹೋಗುವ ನಾಲ್ವರು ಸ್ಪರ್ಧಿಗಳನ್ನು ರಿವೀಲ್ ಮಾಡಲಾಗಿತ್ತು.
ಇಂದು ಬಿಗ್ ಬಾಸ್ ಗೆ ಹೋಗುವ ಮೊದಲ ಸ್ಪರ್ಧಿ ತಮ್ಮದೇ ಸ್ಟೈಲ್ ನಲ್ಲಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿರುವ ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ.
ಯಾರು ಇವರು..?
ಟಿಕ್ ಟಾಕ್ ನಲ್ಲಿ ಖ್ಯಾತಿಗಳಿಸಿ, ಕಿರುತೆರೆಯ ʼಗೀತಾʼ ಧಾರಾವಾಹಿಯಲ್ಲಿ ಅಭಿನಯಿಸಿ ಗಮನ ಸೆಳೆದಿರುವ ನಟಿ ಭವ್ಯಾ ಗೌಡ (Bhavya Gowda) ಅವರ ಹೆಸರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

ಕ್ಯಾರೆಕ್ಟರ್ ಲುಕ್ ನಲ್ಲೇ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಭವ್ಯಾ ಅವರು ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದರು. 2009ರಲ್ಲಿ ‘ಮಿಸ್ ಇಂಗ್ಲೆಂಡ್ ಅರ್ತ್’ನ ಫೈನಲಿಸ್ಟ್ ಆಗಿದ್ದರು. ಇದರ ಜೊತೆಗೆ 2002ರಲ್ಲಿ ‘ಮಿಸ್ ಇಂಡಿಯಾ ಪರ್ಸಾನಲಿಟಿ’ ಆಗಿದ್ದರು.
ಯಮುನಾ ಶ್ರೀನಿಧಿ: ಬಿಗ್ ಬಾಸ್ ಮನೆಗೆ ಭವ್ಯಾ ಗೌಡ ಜತೆಗೆ ಮತ್ತೊಬ್ಬರು ಕಿರುತೆರೆ ನಟಿಯರಾದ ಯಮುನಾ ಶ್ರೀನಿಧಿ ಅವರು ಎಂಟ್ರಿ ಆಗಿದ್ದಾರೆ.
ಹಿರಿಯ ನಟಿಯರಾದ ಅವರು ಹಲವರು ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ಸಪ್ತ ಸಾಗರದ ಆಚೆ ಎಲ್ಲೋ’, ‘ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ಯಮುನಾ ಶ್ರೀನಿಧಿ ಅವರು ಸದ್ಯಕ್ಕೆ ‘ನನ್ನ ದೇವ್ರು’ ಧಾರಾವಾಹಿಯಲ್ಲಿ ಪಾತ್ರವೊಂದನ್ನು ಮಾಡಿದ್ದಾರೆ.

ನಟಿಯಾಗಿ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಯಲ್ಲೂ ಯಮುನಾ ಗುರುತಿಸಿಕೊಂಡಿದ್ದಾರೆ.
ಇಬ್ಬರು ಕೂಡ ಸ್ವರ್ಗಕ್ಕೆ ಹೋಗಲಿದ್ದಾರೆ.
Laxmi News 24×7