ಮೈಸೂರು: ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದೂಗಳು ಮುಂದಕ್ಕೆ ಬಾರದ ಜನ ಹಾಗೂ ಬೇರೆಯವರನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್(K. S. Bhagawan) ಮತ್ತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮೈಸೂರಿನ ಟೌನ್‌ಹಾಲ್‌ನಲ್ಲಿ ಭಾನುವಾರ ನಡೆದ ಮಹಿಷಾ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಹಿಂದೂ ಧರ್ಮ ಅಂದರೆ ಅದು ಹಿಂದೂಗಳ ಧರ್ಮ ಅಲ್ಲ.
ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ ಹೊರತು ಹೆಂಗಸರನ್ನು ಬ್ರಾಹ್ಮಣರು ಎನ್ನುವುದಿಲ್ಲ ಅವರನ್ನೂ ಶೂದ್ರರು ಎನ್ನುತ್ತಾರೆ.ದೇವಸ್ಥಾನ ಕಟ್ಟುವುದು ಶೂದ್ರರು. ಆದರೆ ದೇವಸ್ಥಾನದ ಒಳಗೆ ಇರುವವರು ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಬಿಟ್ಟುಕೊಳ್ಳುವುದಿಲ್ಲ. ಅದಕ್ಕಾಗಿ ನಾವು ಶೂದ್ರರಲ್ಲ ಎಂದು ಹೇಳಬೇಕು. ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಸಬೇಕು. ದೇವಸ್ಥಾಕ್ಕೆ ಹೋದರೆ ಏನು ಆಗಲ್ಲ. ತಟ್ಟೆಗೆ ದುಡ್ಡು ಹಾಕುತ್ತೀರಾ, ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡುತ್ತಾರೆ ಅಷ್ಟೇ. ದೇವಸ್ಥಾನಕ್ಕೆ ಹೋದರೆ ಕಳೆದುಕೊಳ್ಳುತ್ತೇವೆ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು ಎಂದರು.
Laxmi News 24×7