ಬೆಂಗಳೂರು: ಪ್ರಿಯಕರನ ಮೊಬೈಲ್ ನಲ್ಲಿದ್ದಂತ ತನ್ನ ಖಾಸಗಿ ಪೋಟೋ, ವೀಡಿಯೋ ಡಿಲೀಟ್ ಮಾಡೋ ಸಲುವಾಗಿ ಚಾಲಾಕಿ ಪ್ರಿಯತಮೆಯೊಬ್ಬಳು ಆತನ ಮೊಬೈಲ್ ರಾಬರಿ ಮಾಡಿಸಿ, ತಗಲಾಕಿಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಪ್ರಿಯಕರನನ್ನೇ ರಾಬರಿ ಮಾಡಿದಂತ ಪ್ರಿಯತಮೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬೆಳ್ಳಂದೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಂತ ಶೃತಿ ಎಂಬಾಕೆ ಪ್ರಿಯಕರ ವಂಶಿಕೃಷ್ಣನನ್ನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಳು. ಕೆಲ ದಿನಗಳಿಂದ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರಾಗುವಂತ ಪ್ಲಾನ್ ಮಾಡಿದ್ದಳು. ಆದರೇ ವಂಶಿಕೃಷ್ಣ ಮೊಬೈಲ್ ನಲ್ಲಿ ಆಕೆಯ ಖಾಸಗಿ ಪೋಟೋ, ವೀಡಿಯೋಗಳು ಇದ್ದವು. ಅವುಗಳನ್ನು ಡಿಲಿಟ್ ಮಾಡುವಂತ ಪ್ಲಾನ್ ಮಾಡಿದ್ದಳು.
ಈ ಕಾರಣದಿಂದಲೇ ಸೆಪ್ಟೆಂಬರ್.20ರಂದು ವಂಶಿಕೃಷ್ಣ ಭೇಟಿಯಾಗುವಂತೆ ಟೆಕ್ಕಿ ಸೂಚಿಸಿದ್ದರು. ಆಕೆಯ ಸೂಚನೆಯಂತೆ ಕಾರಿನಲ್ಲಿ ವಂಶಿಕೃಷ್ಣ ತೆರಳುತ್ತಿದ್ದಾಗ ಆತನ ಕಾರಿಗೆ ಬೈಕ್ ನಲ್ಲಿ ಬಂದಂತವರು ತಾಗಿಸಿ ಕಿರಿಕ್ ತೆಗೆದಿದ್ದರು. ಈ ಗಲಾಟೆಯಲ್ಲಿ ವಂಶಿಕೃಷ್ಣ ಅವರ ಒಂದೂವರೆ ಲಕ್ಷ ಬೆಲೆಯ ಮೊಬೈಲ್ ಪೋನ್ ರಾಬರಿ ಮಾಡಿದ್ದರು.