Breaking News

ಸೈಬರ್‌ ಅಪರಾಧ ತಡೆಗೆ ಯುವಕರ ತಂಡ; ಜನರಿಗೂ ಡಿಜಿಟಲ್ ಸಾಕ್ಷರತೆ

Spread the love

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಜಿಲ್ಲೆಯಲ್ಲಿ ಸೈಬರ್‌ ಅಪರಾಧಗಳನ್ನು ತಡೆಯಲು ಹಾಗೂ ಜನರನ್ನು ಜಾಗೃತಗೊಳಿಸಲು ಯುವಕರ ತಂಡವೊಂದು ನಾಲ್ಕು ವರ್ಷಗಳಿಂದ ಸದ್ದಿಲ್ಲದೇ ಕೆಲಸ ಮಾಡುತ್ತಿದೆ.

‘ಸೈಬರ್‌ ಕ್ರೈಂ ಅವೇರ್‌ನೆಸ್‌ ಟೀಮ್‌ ಚಿಕ್ಕೋಡಿ’ ಎಂಬ ಹೆಸರಿನಲ್ಲಿ ಎಂಟು ಯುವಕರು ತಂಡ ಉಚಿತವಾಗಿ ಡಿಜಿಟಲ್‌ ಸಾಕ್ಷರತೆ ನಡೆಸಿದೆ.

2020ರಲ್ಲಿ ರಚನೆಯಾದ ತಂಡವು ಈವರೆಗೆ 3,700ಕ್ಕೂ ಹೆಚ್ಚು ಸೈಬರ್‌ ವಂಚನೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್‌ ಇಲಾಖೆಗೆ ನೆರವಾಗಿದೆ.

2,500 ‘ಲೋನ್‌ ಆಯಪ್’ ವಂಚನೆ ಪ್ರಕರಣ, 1,000 ವಿಡಿಯೊ ಕಾಲ್ ವಂಚನೆ, 200ಕ್ಕೂ ಹೆಚ್ಚು ‘ಆನ್‌ಲೈನ್ ಜಾಬ್’ ಆಮಿಷದ ಪ್ರಕರಣಗಳು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಪತ್ತೆಯಾಗಿವೆ. ವಂಚಕರ ಮೂಲ ಪತ್ತೆ ಮಾಡುವಲ್ಲಿ ಹಾಗೂ ವಂಚನೆಗೆ ಒಳಗಾದವರಿಗೆ ನ್ಯಾಯ ದೊರಕಿಸುವಲ್ಲಿ ತಂಡದವರು ಸಕ್ರಿಯರಾಗಿದ್ದಾರೆ. ಆನ್‌ಲೈನ್‌ ಉದ್ಯಮಕ್ಕೆ ಹೂಡಿಕೆ ಮಾಡುವವರಿಗೆ, ಆನ್‌ಲೈನ್‌ ಕೆಲಸಗಳಿಗೆ ಅರ್ಜಿ ಹಾಕುವವರು, ವಿಡಿಯೊ ಗೇಮ್‌ಗಳಲ್ಲಿ ಹಣ ಹೂಡುವವರು ಮುಂತಾದವರಿಗೆ ಯಾವುದು ನಿಜ, ಯಾವುದು ಸುಳ್ಳು ಎಂಬ ಮಾಹಿತಿಯನ್ನೂ ನೀಡುತ್ತಿದ್ದಾರೆ.


Spread the love

About Laxminews 24x7

Check Also

ನಾನು ಸಿಎಂ ಆದರೆ ಪೊಲೀಸರಿಗೆ AK47 ಗನ್ ಬಳಕೆಗೆ ಅನುಮತಿ ಕೊಡುತ್ತೇನೆ: ಯತ್ನಾಳ್ ಹೇಳಿಕೆ

Spread the love ಬೆಳಗಾವಿ: ನಾನು ಮುಖ್ಯಮಂತ್ರಿಯಾದರೆ ಪೊಲೀಸರಿಗೆ AK47 ಗನ್ ಬಳಕೆಗೆ ಅನುಮತಿ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ