ಉಪೇಂದ್ರ ನಾಯಕರಾಗಿ ನಟಿಸಿ, ನಿರ್ದೇಶಿಸಿದ್ದ ಹಾಗೂ ಶಿಲ್ಪಾ ಶ್ರೀನಿವಾಸ್ ಅವರು ನಿರ್ಮಿಸಿದ್ದ ಉಪೇಂದ್ರ ಚಿತ್ರ 1999ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಈಗ 25 ವರ್ಷಗಳ ನಂತರ ಚಿತ್ರ ಕಳೆದ ವಾರ ರೀ ರಿಲೀಸ್ ಆಗಿದೆ. ಮತ್ತೂಮ್ಮೆ ಅಭಿಮಾನಿಗಳು ಈ ಚಿತ್ರಕ್ಕೆ ಜೈ ಎಂದಿದಾರೆ.
ಚಿತ್ರಕ್ಕೆ ಹೊಸ ಚಿತ್ರದ ರಿಲೀಸ್ ದಿನ ಸಿಗುವಂತಹ ಅದ್ಧೂರಿ ಓಪನಿಂಗ್ ಸಿಕ್ಕಿದೆ. ಉಪ್ಪಿ ಅಭಿಮಾನಿಗಳು ಚಿತ್ರವನ್ನು ನೋಡಿ ಫಿದಾ ಆಗಿದ್ದಾರೆ. ಚಿತ್ರ ಮರು ಬಿಡುಗಡೆಯಾಗಿ ಒಂದು ವಾರ ಪೂರೈಸಿ ಎರಡನೇ ವಾರಕ್ಕೆ ಕಾಲಿಡುತ್ತಿದೆ. ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ತ್ರಿವೇಣಿ ಸೇರಿದಂತೆ ಅನೇಕ ಚಿತ್ರಮಂದಿರಗಳಲ್ಲಿ ಎರಡನೇ ವಾರದಲ್ಲೂ ಚಿತ್ರ ಮುಂದುವರೆಯಲಿದೆ. ಈ ಚಿತ್ರ ಬರೀ ಕನ್ನಡಿಗರಿಗಷ್ಟೇ ಅಲ್ಲ. ಅನ್ಯ ಭಾಷೆಯವರಿಗೂ ಮೆಚ್ಚುಗೆಯಾಗಿದೆ.
ಚಿತ್ರದ ರೀ ರಿಮೇಕ್ ರೈಟ್ಸ್ ನೀಡುವಂತೆ ನಿರ್ಮಾಪಕರಿಗೆ ಅನೇಕ ಭಾಷೆಗಳಿಂದ ಬೇಡಿಕೆ ಬರುತ್ತಿದೆಯಂತೆ. ಈ ಕುರಿತು ಮಾತನಾಡುವ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್, “25 ವರ್ಷಗಳ ನಂತರವೂ ಜನರು ಉಪೇಂದ್ರ ಚಿತ್ರಕ್ಕೆ ತೋರುತ್ತಿರುವ ಒಲವಿಗೆ ಮನತುಂಬಿ ಬಂದಿದೆ’ ಎನ್ನುತ್ತಾರೆ.
Laxmi News 24×7