Breaking News

ಸಾಲ ಭಾದೆ, ಮುಂಗಾರು ಬೆಳೆ ಹಾನಿಯಿಂದ ‌ಮನನೊಂದು ರೈತ ಆತ್ಮಹತ್ಯೆ

Spread the love

ಚಿಂಚೋಳಿ: ತಾಲೂಕಿನ ಪೋತಂಗಲ‌ ಗ್ರಾಮದಲ್ಲಿ ರೈತನೋರ್ವರು ಸಾಲದ ಭಾದೆ ತಾಳದೆ ಮತ್ತು ಹೊಲದಲ್ಲಿ ಬೆಳೆದ ಮುಂಗಾರು ಬೆಳೆ ಹಾನಿಯಿಂದ ‌ಮನನೊಂದು ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.26ರ ಗುರುವಾರ ಸಂಜೆ ನಡೆದಿದೆ.

ಪೊತಂಗಲ ಗ್ರಾಮದ ಪಾಂಡಪ್ಪ ತಿಪ್ಪಣ್ಣ(45) ಮೃತಪಟ್ಟ ರೈತ.

 

ಪ್ರಸ್ತುತ ಸಾಲಿನಲ್ಲಿ ಮುಂಗಾರು ಬೆಳೆಗಳಾದ ತೊಗರಿ, ಹೆಸರು, ಉದ್ದುಗಳನ್ನು ಪಾಂಡಪ್ಪ ತಿಪ್ಪಣ್ಣ ತನ್ನ ‌ಹೊಲದಲ್ಲಿ ಬೆಳೆದಿದ್ದ. ಆದರೆ ಅತಿಯಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಹಾನಿಯಾಗಿದ್ದವು.‌

ಅಲ್ಲದೇ ನಿಡಗುಂದಾ ಗ್ರಾಮ ಪಿಕೆಜಿಬಿ ಬ್ಯಾಂಕ್ ನಿಂದ 1 ಲಕ್ಷ ರೂ. ಬೆಳೆ ಸಾಲವನ್ನು ಪಡೆದುಕೊಂಡಿದ್ದನು. ಆದ್ದರಿಂದ ಆ ಬ್ಯಾಂಕ್‌ ನಿಂದ ರೈತನಿಗೆ ನೋಟಿಸ್‌ ಕೂಡಾ ನೀಡಲಾಗಿತ್ತು. ಅಲ್ಲಿನ ಖಾಸಗಿ ಸಾಲದ ಹೊರೆ ಬಾಧೆ ತಾಳದೇ‌ ಬೆಳಗಿನ ಜಾವ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದನು. ಕೂಡಲೇ ಆತನನ್ನು ಸಮೀಪದ ನಿಡಗುಂದಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ನೀಡಿ ಹೆಚ್ಚಿನ ‌ಚಿಕಿತ್ಸೆಗಾಗಿ ಸೇಡಮ ಆಸ್ಪತ್ರೆಯಲ್ಲಿ ಸೇರಿಸಲಾಯಿತು. ‌ಇನ್ನು‌ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಜಿಲ್ಲೆಯ ಜೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೇರಿಸಲಾಗಿತ್ತು. ಆದರೆ ಗುರುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಪತ್ನಿ ‌ಶಾಮಮ್ಮ ಕೊರಮನ‌ ನೀಡಿದ ದೂರಿನ ಮೇರೆಗೆ ಸುಲೇಪೇಟ‌ ಪೋಲಿಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಿಕೊಳ್ಳಲಾಗಿದೆ.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ‌ಒಬ್ಬಳು ಹೆಣ್ಣು ‌ಮಗಳನ್ನು ಅಗಲಿದ್ದಾರೆ ಎಂದು ಗ್ರಾಮದ ಮುಖಂಡರಾದ ವಿಶ್ವನಾಥ ಪಾಟೀಲ ತಿಳಿಸಿದ್ದಾರೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ