ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನವರಿಗೆ ಭಾರಿ ಹಿನ್ನಡೆಯಾದ ಕಾರಣ ಕಾನೂನು ತಜ್ಞರ ತಂಡಕ್ಕೆ ಗೇಟ್ ಪಾಸ್ ನೀಡಲು ಸಿಎಂ ನಿರ್ಧರಿಸಿದ್ದಾರೆ.
ಮುಡಾ ಹಗರಣ ಹಾಗೂ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ರದ್ದುಗೊಳಿಸುವಂತೆ ಸಿಎಂ ಹೈ ಕೋರ್ಟ್ ಮೊರೆಹೋಗಿದ್ದರು, ಆದರೆ ಅಲ್ಲಿ ಸಿದ್ದರಾಮಯ್ಯ ನವರಿಗೆ ಸಾಲು ಸಾಲು ಹಿನ್ನಡೆಯಾಗುತ್ತಿರುವ ಕಾರಣ ಕಾನೂನು ತಜ್ಞರ ತಂಡವನ್ನು ಬದಲಾವಣೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ.
ಇದೀಗ ಸಚಿವ ಸಂಪುಟ ಸಭೆಯಲ್ಲಿ ಕಾನೂನು ತಜ್ಞರ ತಂಡದ ಬಗ್ಗೆ ಚರ್ಚೆ ನಡೆಸಲಿದ್ದು, ಹೊಸ ತಂಡದ ರಚನೆಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಸಚಿವರೆಲ್ಲರು ಹೊಸ ತಂಡ ರಚಿಸಲು ಹೇಳಿದರೆ ಹಳೆ ತಂಡಕ್ಕೆ ಗೇಟ್ ಪಾಸ್ ನೀಡುವುದು ಖಚಿತ ಎನ್ನಲಾಗಿದೆ..
ಅಷ್ಟೇ ಅಲ್ಲದೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ಕಾನೂನು ಸಲಹೆಗಾರ ಪೊನ್ನಣ್ಣ ಅವರನ್ನು ಬದಲಾಯಿಸಲು ಸರ್ಕಾರ ಚಿಂತನೆ ನಡೆಸುತ್ತಿದ್ದಾರೆ.
ಜೊತೆಗೆ ಕಾನೂನು ಸಚಿವರಾದ ಹೆಚ್.ಕೆ ಪಾಟೀಲ್ ಜೊತೆ ಕೂಡ ಚರ್ಚೆ ನಡೆಸಿದ್ದು, ಈ ವೇಳೆ ಕೆಲ ಅಧಿಕಾರಿಗಳ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಯಾವ ರೀತಿ ಗೆಲುವನ್ನು ಸಾಧಿಸಬಹುದು ಎಂದು ಎಂಬ ಲೆಕ್ಕಾಚಾರವನ್ನು ಮಾಡಲಾಗಿದೆ.