ದಸರಾ, ದೀಪಾವಳಿ ಹಬ್ಬ (Dasara And Deepavali) ಬಂತು ಅಂದ್ರೆ ನೆನಪಾಗೋದು ರುಚಿರುಚಿಯಾದ ಸ್ವೀಟ್‌ಗಳು (Sweets). ಈ ಹಬ್ಬಗಳಲ್ಲಿ ಸ್ವೀಟ್ ಹಂಚಿ ಸಂಭ್ರಮಿಸ್ತಾರೆ. ಆದರೆ ಇದೀಗ ಸ್ವೀಟ್‌ಗಳಲ್ಲೂ ಕಲಬೆರಕೆ (Mixing) ಪದಾರ್ಥ ಇದ್ಯಾ ಅನ್ನೋ ಅನುಮಾನ ಶುರುವಾಗಿದೆ.
ಈ ಹಿನ್ನೆಲೆ ಸ್ವೀಟ್ಸ್‌ಗಳ ಗುಣಮಟ್ಟ ಪರಿಶೀಲನೆಗೆ ಆಹಾರ ಇಲಾಖೆ (Department of Food) ಮುಂದಾಗಿದೆ.
ಈ ಕಲಿಗಾಲದಲ್ಲಿ ಕಲಬೆರಕೆ ಇಲ್ದಿರೋ ಆಹಾರನೇ ಇಲ್ವಾ ಅನ್ನೋ ಅನುಮಾನ ಹುಟ್ಕೊಂಡ್ ಬಿಟ್ಟಿದೆ. ಕಲಬೆರಕೆ ಆಹಾರ ಮನುಷ್ಯನ ಜೀವಕ್ಕೆ ಅಪಾಯ ತಂದೊಡ್ತಿವೆ. ಹೀಗಾಗಿ ಇಂತಹ ಆಹಾರ ಪದಾರ್ಥಗಳ ಮೇಲೆ ನಿರ್ಬಂಧ ಹೇರ್ತಿದೆ ಆಹಾರ ಇಲಾಖೆ. ಈಗಾಗ್ಲೇ ಗೋಬಿ, ಕಾಟನ್ ಕ್ಯಾಂಡಿ, ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಗೆ ಬ್ರೇಕ್ ಹಾಕಿದ್ದು, ಇದೀಗ ಸ್ವೀಟ್ಸ್‌ಗಳ ಸರದಿ.
ಹೌದು, ದಸರಾ ಹಾಗೂ ದೀಪಾವಳಿ ಹಿನ್ನೆಲೆ ಜನರು ಹೆಚ್ಚಾಗಿ ಸ್ವೀಟ್ಸ್‌ಗಳನ್ನ ಖರೀದಿ ಮಾಡ್ತಾರೆ. ಆದರೆ ಅನೇಕ ಸ್ವೀಟ್ಸ್‌ಗಳಲ್ಲಿ ಕಲರ್ ಬಳಕೆ ಹಾಗೂ ಅದಕ್ಕೆ ಸೇರಿಸುವ ಪದಾರ್ಥಗಳ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ. ಹೀಗಾಗಿ ಆಹಾರ ಸುರಕ್ಷತ ಇಲಾಖೆ ಎಲ್ಲಾ ಬ್ರಾಂಡ್‌ಗಳ ಸ್ವೀಟ್ಸ್‌ಗಳನ್ನ ಪರೀಕ್ಷೆ ಮಾಡೋದಕ್ಕೆ ಮುಂದಾಗಿದೆ.
ನಮ್ಮ ಆರೋಗ್ಯ ಇಲಾಖೆ ಹಾಗೂ ಫುಡ್ ಸೇಫ್ಟಿ ಅಧಿಕಾರಿಗಳಿಗೆ ಬೇರೆ ಬೇರೆ ಪದಾರ್ಥಗಳನ್ನು, ಸಂಶಯ ಇರುವ ಕಡೆ ಎಲ್ಲಾ ಪ್ರದೇಶಗಳಲ್ಲೂ ತನಿಖೆ ಮಾಡ್ತಾರೆ. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇರುತ್ತೆ, ಅದರ ಅನ್ವಯ ಕ್ರಮಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಬೇಕರಿಗಳ ಐಟಂಗಳ ಮೇಲೂ ಆಹಾರ ಇಲಾಖೆ ನಿಗಾವಹಿಸಲು ಮುಂದಾಗಿದೆ. ತುಪ್ಪದಿಂದ ತಯಾರಾಗುವ ಸ್ವೀಟ್‌ಗಳ ಮೇಲೂ ಕಣ್ಣಿಟ್ಟಿದೆ. ಹೀಗಾಗಿ ಬೇಕರಿ ಹಾಗೂ ಸ್ವೀಟ್ಸ್ ಮಾರಾಟಗಾರರು ಕೂಡ ಅಲರ್ಟ್ ಆಗಿದ್ದಾರೆ.
Laxmi News 24×7