Breaking News

ಸಾಲು ಮರದ ತಿಮ್ಮಕ್ಕ ಪಾರ್ಕ್‌ ಸಾಲು ಸಾಲು ಸಮಸ್ಯೆ!

Spread the love

ಪುತ್ತೂರು: ಪರಿಸರ ಪ್ರೀತಿ ಮೂಡಿಸಬೇಕಿದ್ದ, ಸದಾ ಕಾಲ ನಳನಳಿಸ ಬೇಕಿದ್ದ ವೃಕ್ಷೋದ್ಯಾನವೊಂದು ನಿರ್ವಹಣೆ ಕೊರತೆಯಿಂದ ತನ್ನ ಲವಲವಿಕೆಯನ್ನೇ ಕಳೆದುಕೊಂಡು ನಿರ್ಜಿವ ಸ್ಥಿತಿಯಲ್ಲಿದೆ.

ಐದು ವರ್ಷದ ಹಿಂದೆ ನಗರದ ಬೀರಮಲೆಯಲ್ಲಿ ಸ್ಥಾಪಿಸಲಾಗಿರುವ ಸಾಲು ಮರ ತಿಮ್ಮಕ್ಕ ಟ್ರೀ ಪಾರ್ಕ್‌ನ ಸ್ಥಿತಿ ಹೇಗಿದೆ ಎಂದು ಉದಯವಾಣಿ ಸುದಿನ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದ ದೃಶ್ಯ ಇದು.

ಬೆಟ್ಟದ ತುತ್ತತುದಿಯಲ್ಲಿ ಇರುವ, ಪುತ್ತೂರಿಗೆ ಮುಕುಟಪ್ರಾಯದಂತಿರಬೇಕಿದ್ದ ವೃಕ್ಷೋದ್ಯಾನದ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಂತಾಗಿದೆ. ಶುಲ್ಕ ಸಂಗ್ರಹ ಬಿಟ್ಟರೆ ಅರಣ್ಯ ಇಲಾಖೆ ಈ ಕಡೆಗೆ ತಿರುಗಿಯೂ ನೋಡಿದಂತಿಲ್ಲ.

ಏನೆಲ್ಲಾ ಸೌಲಭ್ಯಗಳಿವೆ, ಆದರೆ..
ವೃಕ್ಷೋದ್ಯಾನದಲ್ಲಿ ಮಕ್ಕಳು ಮತ್ತು ಹಿರಿಯರ ಮನೋರಂಜನೆಗಾಗಿ ಹಲವು ವ್ಯವಸ್ಥೆಗಳಿವೆ. ಜೋಕಾಲಿ, ಜಾರುಬಂಡಿ, ನೆಟ್‌ವಾಕ್‌, ರೋಪ್‌ ವೇ, ಕಾರಂಜಿ, ಪುಟ್ಟದಾದ ತಾವರೆಕೊಳ, ಯೋಗ ಕುಟೀರ, ಪರಿಸರ ಕಾಳಜಿ ಸಂಬಂಧ ಸಮಾಲೋಚಿಸಲು ಸಭಾಗೃಹ, ಮಾಹಿತಿನ ಸಂವಹನ ಕೇಂದ್ರ, ಶೌಚಾಲಯ, ನೀರಿನ ಸೌಲಭ್ಯ ಇವೆ. ಆದರೆ, ಇವು ಯಾವುದೂ ನಿರೀಕ್ಷಿತ ರೀತಿಯಲ್ಲಿ ಸದ್ಭಳಕೆ ಆಗದಂತ ವಾತಾವರಣ ಇಲ್ಲಿದೆ. ಅತ್ಯಾಕರ್ಷಕ ರೀತಿಯಲ್ಲಿ ಇರುವ ಪ್ರವೇಶ ದ್ವಾರವನ್ನು ನಂಬಿ ಒಳಗೆ ಹೋದರೆ ಯಾವುದೂ ಆಸಕ್ತಿ ಕೆರಳಿಸುವಂತೆ ಕಾಣುತ್ತಿಲ್ಲ, ಎಲ್ಲವೂ ನಿರ್ಜೀವ ಮತ್ತು ನಿರ್ಜನ.

ಬೀರಮಲೆ ಗುಡ್ಡದ ಸ್ಥಿತಿ ಬರಬಹುದು!
ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳುವ ಎಲ್ಲ ಅವಕಾಶಗಳಿರುವ ಬೀರಮಲೆ ಗುಡ್ಡ ಅಪಖ್ಯಾತಿಯಿಂದಲೇ ಹೆಚ್ಚು ಸುದ್ದಿಯಾದದ್ದು. ಸೂಕ್ತ ಭದ್ರತೆ, ರಕ್ಷಣಾ ಬೇಲಿ, ಕಣ್ಗಾವಲು ಇಲ್ಲದ ಕಾರಣ ಈ ಪರಿಸರವನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡದ್ದೆ ಹೆಚ್ಚು. ಅದೇ ಪರಿಸರದಲ್ಲಿರುವ ವೃಕ್ಷೋದ್ಯಾನದ ಬಗ್ಗೆ ಇಲಾಖೆ ನಿರ್ಲಕ್ಷ್ಯ ವಹಿಸಿ ಬೀರಮಲೆ ಗುಡ್ಡದ ಸಾಲಿಗೆ ಇದು ಸೇರುವ ಸಾಧ್ಯತೆ ಇದೆ. ಸಾಲುಮರ ತಿಮ್ಮಕ್ಕನಂತಹ ಅಪ್ಪಟ ಪರಿಸರ ಪ್ರೇಮಿಯ ಹೆಸರಿನಲ್ಲಿ ಈ ವೃಕ್ಷೋದ್ಯಾನ ಇದ್ದು ಅವರ ಹೆಸರಿಗೆ ಅಗೌರವ ಆಗದಂತೆ ನಿರ್ವಹಣೆ ಇಲಾಖೆಯು ಪಾರ್ಕ್‌ ಅನ್ನು ಕಾಯಬೇಕು ಅನ್ನುವುದು ಪ್ರವಾಸಿಗರ ನೇರ ಮಾತು.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ