ಬೆಂಗಳೂರು,ಸೆ.24- ಹೈಕೋರ್ಟ್ನ ತೀರ್ಪು ಸತ್ಯಕ್ಕೆ ಸಂದ ಜಯ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಮುಡಾ ಪ್ರಕರಣದ ಅರ್ಜಿದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.ತೀರ್ಪು ಪ್ರಕಟಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಮ ಹೋರಾಟಕ್ಕೆ ಸಿಕ್ಕ ಜಯ.
ರಾಜಕಾರಣಿಗಳು ತಮ ಅಧಿಕಾರವನ್ನ ದುರುಪಯೋಗಪಡಿಸಿಕೊಂಡು ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆಗೆ ತಕ್ಕ ಪಾಠವಾಗಿದೆ ಎಂದರು.ರಾಜ್ಯಪಾಲರ ಹುದ್ದೆ ಹಾಗೂ ಅವರ ವಿವೇಚನಾಧಿಕಾರಿಗಳ ಬಗ್ಗೆಯೂ ಚರ್ಚೆಯಾಗಿತ್ತು.ಹೈಕೋರ್ಟ್ನ ತೀರ್ಪು ಎಲ್ಲದಕ್ಕೂ ತೆರೆ ಎಳೆದಿದೆ. ಮುಂದಿನ ದಿನಗಳಲ್ಲೂ ನಾವು ಕಾನೂನಾತಕ ಹೋರಾಟಗಳನ್ನು ಮುಂದುವರೆಸುತ್ತೇವೆ ಎಂದು ಅವರು ತಿಳಿಸಿದರು.
Laxmi News 24×7