Breaking News

ಬಳ್ಳಾರಿ ಜಿಲ್ಲೆ ವಿಭಾಗಿಸಿ ನೂತನವಾಗಿ ವಿಜಯನಗರ ಜಿಲ್ಲೆ ರಚನೆ

Spread the love

ಬೆಂಗಳೂರು,ನ.-ಬಳ್ಳಾರಿ ಜಿಲ್ಲೆ ವಿಭಾಗಿಸಿ ನೂತನವಾಗಿ ವಿಜಯನಗರ ಜಿಲ್ಲೆ ರಚನೆ ಮಾಡಲು ರಾಜ್ಯ ಸರ್ಕಾರ ಇಂದು ವಿದ್ಯುಕ್ತವಾಗಿ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಗೆ ಐದು ತಾಲ್ಲೂಕುಗಳನ್ನು ಸೇರ್ಪಡೆ ಮಾಡಲು ಸರ್ಕಾರ ಸಮ್ಮತಿಸಿದೆ.

ನೂತನವಾಗಿ ರಚನೆಯಾಗಲಿರುವ ವಿಜಯನಗರ ಜಿಲ್ಲೆಗೆ ಹೊಸಪೇಟೆ, ಹರಪ್ಪನಹಳ್ಳಿ, ಹೂವಿನಹಡಗಲಿ, ಅಗರಿಬೊಮ್ಮನಹಳ್ಳಿ, ಕೊಟ್ಟರೂ ಹಾಗೂ ಕೂಡ್ಲಗಿ ತಾಲ್ಲೂಕುಗಳು ಈ ಜಿಲ್ಲಾ ವ್ಯಾಪ್ತಿಗೆ ಬರಲಿವೆ ಎಂದು ಸಭೆಯ ಬಳಿಕ ಕಾನೂನು ವ್ಯವಹಾರಗಳ ಸಚಿವ ಜಿ.ಟಿ.ಮಾಧುಸ್ವಾಮಿ ಪತ್ರಿಕಾಗೋಷ್ಠಿಗೆ ತಿಳಿಸಿದರು.ಇದರಂತೆ ವಿಜಯನಗರ ಜಿಲ್ಲೆಗೆ ಆರು ತಾಲ್ಲೂಕುಗಳು, ಉಳಿದ ತಾಲ್ಲೂಕುಗಳು ಬಳ್ಳಾರಿಗೆ ಉಳಿಯಲಿವೆ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಪಡೆದು ನಂತರ ಅಕೃತವಾಗಿ ಜಿಲ್ಲೆಯನ್ನು ಘೋಷಣೆ ಮಾಡಲಾಗುವುದು ಎಂದರು.


Spread the love

About Laxminews 24x7

Check Also

ಒಂದೇ ದಿನ ನಾಲ್ಕು ಪ್ರಕರಣ ದಾಖಲು, 7 ಜನರ ಬಂಧನ; ₹12,840 ನಗದು ಜಪ್ತಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ದಾಳಿ

Spread the love ಒಂದೇ ದಿನ ನಾಲ್ಕು ಪ್ರಕರಣ ದಾಖಲು, 7 ಜನರ ಬಂಧನ; ₹12,840 ನಗದು ಜಪ್ತಿ ಮಾರ್ಕೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ