ಕಾಗವಾಡ: ಹೃದಯಾಘಾತದಿಂದ ಶನಿವಾರ ನಸುಕಿನಲ್ಲಿ ನಿಧನರಾದ ಕುಡಚಿ ಪಿಎಸ್‌ಐ ಸುರೇಶ ಖೋತ ಅವರ ಅಂತ್ಯಕ್ರಿಯೆ ಭಾನುವಾರ ಸಕಲ ಸರ್ಕಾರಿ ಗೌರವದೊಂದೊಗೆ ನೆರವೇರಿತು.
ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಕರ್ತವ್ಯದಲ್ಲಿದ್ದಾಗ ಅವರಿಗೆ ಹೃದಯಾಘಾತವಾಗಿತ್ತು. ಮೀರಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು.
ಕಾಗವಾಡ ರುದ್ರಭೂಮಿಯಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಸಕ ರಾಜು ಕಾಗೆ ಹಾಗೂ ಪೊಲೀಸ್ ಅಧಿಕಾರಿಗಳು ಸರ್ಕಾರದ ಪರ ಅಂತಿಮ ನಮನ ಸಲ್ಲಿಸಿದರು.
Laxmi News 24×7