Breaking News

ಬೆಳಗಾವಿಯಲ್ಲಿ ಪ್ಯಾಲಿಸ್ಟೀನ್‌ ಧ್ವಜದ ಮಾದರಿಯ ಶಾಮಿಯಾನ

Spread the love

ಬೆಳಗಾವಿ: ನಗರದಲ್ಲಿ ಭಾನುವಾರ (ಸೆ.22) ನಡೆಯಲಿರುವ ಈದ್‌ ಮಿಲಾದ್‌ ಮೆರವಣಿಗೆ ಹಿನ್ನೆಲೆಯಲ್ಲಿ, ಇಲ್ಲಿನ ದರ್ಬಾರ್‌ ಗಲ್ಲಿಯ ಬೀದಿಯೊಂದರಲ್ಲಿ ಪ್ಯಾಲಿಸ್ಟೀನ್‌ ಧ್ವಜ ಹೋಲುವ ದೊಡ್ಡ ಶಾಮಿಯಾನ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.

ಬೆಳಿಗ್ಗೆ ವೀರಭದ್ರ ನಗರದಲ್ಲಿ ಬೀದಿಯೊಂದರಲ್ಲಿ ಪ್ಯಾಲಿಸ್ಟೀನ್‌ ಧ್ವಜ ಹೋಲುವ ಬೀದಿ ಶಾಮಿಯಾನ ಹಾಕಲಾಗಿತ್ತು.

ಮುಂದೆ ಎರಡು ಖಡ್ಗ ನೇತುಹಾಕಿ ಅವುಗಳಿಗೂ ಪ್ಯಾಲಿಸ್ಟೀನ್‌ ಧ್ವಜದ ಬಣ್ಣವನ್ನೇ ಬಳಿಯಲಾಗಿತ್ತು. ಇದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿ ತೆರವುಗೊಳಿಸಿದರು.

ದರ್ಬಾರ್‌ ಗಲ್ಲಿಯಲ್ಲೂ ಅರ್ಧ ಕಿಲೋಮೀಟರ್‌ವರೆಗೆ ಶಾಮಿಯಾನ ಹಾಕಲಾಗಿದ್ದು, ಪ್ಯಾಲಿಸ್ಟೀನ್‌ ಧ್ವಜದ ಬಣ್ಣ ಹಾಗೂ ಮಾದರಿ ಬಳಸಲಾಗಿದೆ. ಮಧ್ಯಾಹ್ನ 3ರವರೆಗೂ ಈ ಶಾಮಿಯಾನ ಹಾಗೇ ಇತ್ತು.

ಇದರ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ; ಶಾಮಿಯಾನದ ಕೆಂಪು ಭಾಗವನ್ನು ಮಾತ್ರ ಮಡಚಿ ಅಲ್ಲಿಯೇ ತೂಗು ಬಿಡಲಾಯಿತು.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ