ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿರೋ ಮುನಿರತ್ನ ಪೊಲೀಸ್ರ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿಲ್ವಂತೆ. ಸಂತ್ರಸ್ತೆ ಆರೋಪಕ್ಕೆ ಮುನಿರತ್ನ ಮೊಬೈಲ್ ಪ್ರಮುಖ ಸಾಕ್ಷಿಯಾಗಲಿದೆ. ಆದ್ರೆ ಮುನಿರತ್ನ ತನ್ನ ಮೊಬೈಲ್ ಪೊಲೀಸ್ರಿಗೆ ತೋರಿಸಿಲ್ವಂತೆ. ಮೊಬೈಲ್ ಬಗ್ಗೆ ಕೇಳಿದ್ರೆ ಅಟ್ರಾಸಿಟಿ ಪ್ರಕರಣದಲ್ಲಿ ಪೊಲೀಸ್ರು ಕೋಲಾರ ಬಳಿ ನನ್ನ ಅರೆಸ್ಟ್ ಮಾಡುವಾಗ ಮೊಬೈಲ್ ಮಿಸ್ ಆಗಿದೆ.
ಆ ಸಮಯದಲ್ಲಿ ಜನ ಸೇರಿದ್ರು ಆಗ ನನ್ನ ಮೊಬೈಲ್ ನ ಯಾರೋ ಎತ್ತಿಕೊಂಡಿದ್ದಾರೆ ಅಂತ ಹೇಳ್ತಿದ್ದಾರಂತೆ. ನಿಜಕ್ಕೂ ಮೊಬೈಲ್ ಮಿಸ್ ಆಗಿದ್ಯ ಇಲ್ಲ ಬೇಕಂತಲೇ ಮೊಬೈಲ್ ಮಿಸ್ ಆಗಿದ್ಯಾ ಅನ್ನೋದು ತನಿಯಿಂದಷ್ಟೇ ಗೊತ್ತಾಗಬೇಕಿದೆ.
 Laxmi News 24×7
Laxmi News 24×7
				 
		 
						
					 
						
					 
						
					