ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಅನುಸಾರ ಬರುವ ಅಕ್ಟೋಬರ್ 3 ರಿಂದ 20ರ ವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆ ಇರಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಕಳೆದ ಏಪ್ರಿಲ್ನಲ್ಲೆ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಅದರಂತೆ ಅ.೧ ರವರೆಗೆ ತರಗತಿಗಳು ನಡೆಯಲಿವೆ. ಅ. ೨ ರಂದು ಗಾಂಧಿಜಯಂತಿ. ಮರುದಿನ ಅ.೩ ರಿಂದ ೨೦ ರವರೆಗೆ ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲಾ ಮಕ್ಕಳಿಗೆ ದಸರಾ ರಜೆ ಇರಲಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ. ರಜೆ ಮುಗಿದ ಬಳಿಕ ಅ.೨೧ ರಿಂದ ಮತ್ತೆ ತರಗತಿಗಳು ಪುನರಂಭವಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.