Breaking News

ಕಾಲೇಜ್ ಲೇಡಿಸ್ ಟಾಯ್ಲೆಟ್‌ನಲ್ಲಿ ಕ್ಯಾಮೆರಾ! ವಿದ್ಯಾರ್ಥಿಯಿಂದಲೇ ಕೃತ್ಯ, ಯುವತಿಯರಿಂದ ಗೂಸಾ!

Spread the love

ಬೆಂಗಳೂರು: ಸ್ಕೂಲ್​, ಕಾಲೇಜುಗಳಲ್ಲಿ ಇತ್ತೀಚೆಗೆ ಹಿಡನ್​ ಕ್ಯಾಮೆರಾ ಅಳವಡಿಸಿ, ಚಿತ್ರೀಕರಣ ಮಾಡಿರುವ ಬಗ್ಗೆ ಸುದ್ದಿಗಳು ಕೇಳುತ್ತಲೇ ಇದ್ದೇವೆ. ಇದೀಗ ಬೆಂಗಳೂರಿನ ಕಗ್ಗಲಿಪುರದಲ್ಲಿರುವ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಇದೇ ರೀತಿ ವಾಶ್​ ರೂಮ್​ಗೆ ಕ್ಯಾಮೆರಾ ಅಳವಡಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Bengaluru College: ಕಾಲೇಜ್ ಲೇಡಿಸ್ ಟಾಯ್ಲೆಟ್‌ನಲ್ಲಿ ಕ್ಯಾಮೆರಾ! ವಿದ್ಯಾರ್ಥಿಯಿಂದಲೇ ಕೃತ್ಯ, ಯುವತಿಯರಿಂದ ಗೂಸಾ!

ಹೌದು, ಕಳೆದ ಬಾರಿ ಉಡುಪಿಯ ಕಾಲೇಜೊಂದರ ವಾಶ್​ರೂಮ್​ನಲ್ಲಿ ಮೊಬೈಲ್​​ ಇಟ್ಟಿರುವ ಬಗ್ಗೆ ಭಾರೀ ವಿವಾದ ಸೃಷ್ಟಿಯಾಗಿತ್ತು. ಇದೀಗ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ವಾಶ್​ ರೂಮ್​ನಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಯುವತಿಯರ ವಾಶ್ ರೂಮ್​ನಲ್ಲಿತ್ತು ಕ್ಯಾಮೆರಾ!

ಬೆಂಗಳೂರಿನ ಕಗ್ಗಲಿಪುರದಲ್ಲಿ ಇರುವ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಯುವಕನೋರ್ವ ಹುಡುಗಿಯರ ವಾಶ್​​ ರೂಮ್​ನಲ್ಲಿ ಕ್ಯಾಮೆರಾ ಅಳವಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈಗಾಗಲೇ ಈ ಕ್ಯಾಮೆರಾ ಇಟ್ಟಿದ್ದ ಯುವಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಸ್ಥಳಕ್ಕೆ ಕಗ್ಗಲಿಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಶೌಚಾಲಯದಲ್ಲಿ ವಿದ್ಯಾರ್ಥಿನೀಯರ ವೀಡಿಯೋ ಮಾಡಿದ ವಿದ್ಯಾರ್ಥಿ

ಬೆಂಗಳೂರಿನ ಪ್ರತಿಷ್ಠಿತ​​ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಲೇಡಿಸ್ ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಅಡಗಿ ಕೂತಿದ್ದ ಯುವಕನನ್ನ ಕೂಡಿಹಾಕಿ ಯುವತಿಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಅದೇ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ವಿದ್ಯಾರ್ಥಿಯಾಗಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ವಿದ್ಯಾರ್ಥಿಗಳು ಒತ್ತಅಯ ಹೇರುತ್ತಿದ್ದಾರೆ.

ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಾಲೇಜು ವಿದ್ಯಾರ್ಥಿಗಳು ಈ ಘಟನೆಯನ್ನು ನೋಡಿ ಆಕ್ರೋಶಗೊಂಡು, ಒಗ್ಗಟ್ಟಿನಿಂದ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸ್ಥಳಕ್ಕೆ ರಾಮನಗರ ಎಸ್ ಪಿ ಮತ್ತು ಕಗ್ಗಲೀಪುರ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.


ಸಂಗ್ರಹ ಚಿತ್ರ

 


Spread the love

About Laxminews 24x7

Check Also

ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ – ಆಸ್ಪತ್ರೆಗೆ ದಾಖಲು

Spread the loveಶಿವಮೊಗ್ಗ: ಇಂದಿನಿಂದ ಆರಂಭವಾದ ಸಾಗರ ಮಾರಿಕಾಂಬ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳಿದ್ದ ರಾಜ್ಯ ರಾಜಕಾರಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ