Breaking News

ಶಾಸಕ ಮುನಿರತ್ನ ಮಾಡಿಸಿದ್ದು ಎನ್ನಲಾದ ಹನಿಟ್ರ್ಯಾಪ್ ವೀಡಿಯೊ ವೈರಲ್!

Spread the love

ಬೆಂಗಳೂರು: ಶಾಸಕ ಮುನಿರತ್ನ ಮಾಡಿಸಿದ್ದು ಎನ್ನಲಾದ ಹನಿಟ್ರ್ಯಾಪ್ ವೀಡಿಯೊ ವೈರಲ್‌ ಆಗುತ್ತಿದೆ. ಮುನಿರತ್ನ ಗೋದಾಮಿನಲ್ಲೇ ಈ ಹನಿಟ್ರ್ಯಾಪ್ ನಡೆದಿದೆ ಎನ್ನಲಾಗಿದ್ದು, ಮುನಿರತ್ನ ತನ್ನ ಕಚೇರಿಯಲ್ಲಿ ಕುಳಿತು ಲೈವ್ ನೋಡುತ್ತಿದ್ದರು ಎನ್ನಲಾಗಿದೆ. ದೆ. ಸದ್ಯ ಕಾರ್ಪೊರೇಟರ್ ಪತ್ನಿಯ ಹನಿಟ್ರ್ಯಾಪ್ ವೀಡಿಯೊ ಎನ್ನಲಾಗ್ತಿರೋ ವೀಡಿಯೊ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.

BIGG NEWS: ಶಾಸಕ ಮುನಿರತ್ನ ಮಾಡಿಸಿದ್ದು ಎನ್ನಲಾದ ಹನಿಟ್ರ್ಯಾಪ್ ವೀಡಿಯೊ ವೈರಲ್!

ಈ ನಡುವೆ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ದ ಮಹಿಳೆಯೊಬ್ಬರು 2020ರಿಂದ 2022ರವರೆಗೆ ಅತ್ಯಾಚಾರ ನಡೆಸಿ ಹನಿಟ್ರ್ಯಾಪ್ ಗೆ ಬಳಸಿಕೊಂಡಿರುವ ಕುರಿತು ದೂರು ನೀಡಿದ್ದಾರೆ. ಈ ಸಂಬಂಧ ಕೃತ್ಯ ನಡೆದ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಬುಧವಾರ ತಡರಾತ್ರಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಮುನಿರತ್ನ ಆತನ ಗನ್ ಮ್ಯಾನ್ ವಿಜಯ್ ಕುಮಾರ್, ಸುಧಾಕರ್, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಸೇರಿದಂಕೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ