ಬೆಂಗಳೂರು: ಸಿಲಿಕಾನ್ ಸಿಟಿ ಜನರು ಒಂದು ವಾರದ ಲಾಕ್‍ಡೌನ್ ಕಾಲಕ್ಕೆ ಸಜ್ಜಾಗುತ್ತಿದ್ದಾರೆ. ಈ ಮಧ್ಯೆ ಲಾಕ್‍ಡೌನ್ ಜೊತೆಗೆ ಸೀಲ್‍ಡೌನ್‍ಗೆ ಪಾಲಿಕೆ ಪ್ಲ್ಯಾನ್ ಸಿದ್ಧಗೊಳಿಸುತ್ತಿದೆ.
ಹೌದು.ಕೊರೊನಾ ಹೆಚ್ಚಿರುವ ವಾರ್ಡ್‌ಗಳನ್ನು ಲಾಕ್‍ಡೌನ್ ಜೊತೆಗೆ ಸೀಲ್‍ಡೌನ್ ಮಾಡಲು ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ. ಕಳೆದ 15 ದಿನಗಳಲ್ಲಿ ಕೊರೊನಾ ಸ್ಫೋಟಗೊಂಡ ವಾರ್ಡ್‌ಗಳಲ್ಲಿ ಟಫ್ ಸೀಲ್‍ಡೌನ್ ಜಾರಿಯಾಗುವ ಸಾಧ್ಯತೆಯಿದೆ. ಸೀಲ್‍ಡೌನ್ ಜಾರಿಯಾದರೆ ತುರ್ತು ಮತ್ತೊಂದು ಕಾರಣ ಹೇಳಿ ಓಡಾಡಲು ಸಾಧ್ಯವಿಲ್ಲ.
ಭಾನುವಾರ ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತನ್ನು ರುದ್ರ ನರ್ತನವನ್ನು ಮುಂದುವರಿಸಿದ್ದು, ಒಂದೇ ದಿನ 2,627 ಕೊರೊನಾ ಪ್ರಕರಣಗಳು ಕರುನಾಡಿನಲ್ಲಿ ವರದಿಯಾಗಿವೆ. ಅದಲ್ಲರೂ ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾನುವಾರ 1,525 ಜನರಲ್ಲಿ ಸೋಂಕು ಸೇರಿಕೊಂಡಿದೆ. ಬೆಂಗಳೂರಿನಲ್ಲಿ 206 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರೆ ನಗರದಲ್ಲಿ 14,067 ಸಕ್ರಿಯ ಪ್ರಕರಣಗಳಿವೆ. ಭಾನುವಾರ ಒಂದೇ ದಿನ ಬೆಂಗಳೂರಿನಲ್ಲಿ 45 ಜನರನ್ನು ಕೊರೊನಾ ರಾಕ್ಷಸಿ ಬಲಿ ಪಡೆದಿದೆ. ಹೀಗಾಗಿ ಲಾಕ್‍ಡೌನ್ ಜೊತೆಗೆ ಸೀಲ್‍ಡೌನ್ ಮಾಡಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆ.
ಎಲ್ಲಿ ಸೀಲ್‍ಡೌನ್?
ಶಾಂತಲಾನಗರ, ಸುಧಾಮನಗರ, ಚಾಮರಾಜಪೇಟೆ, ಜಯನಗರ, ಬಾಣಸವಾಡಿ, ವಸಂತನಗರ, ಗಣೇಶಮಂದಿರ ವಾರ್ಡ್, ಹೊಂಬೆಗೌಡ ನಗರ, ಮಾರುತಿ ಸೇವಾ ನಗರ, ಕೊಟ್ಟಿಗೆಪಾಳ್ಯ, ಅರಕೆರೆ, ಮತ್ತಿಕೆರೆ, ಸಂಪಂಗಿರಾಮನಗರ, ರಾಜಗೋಪಾಲ್ ನಗರ, ಯಲಚೇನಹಳ್ಳಿ, ಎಚ್‍ಎಟಿ ವಾರ್ಡ್, ವಿಶ್ವೇಶ್ವರಪುರಂ, ಡಾ.ರಾಜ್‍ಕುಮಾರ್ ವಾರ್ಡ್
https://youtu.be/XuRZ-pKG0FE
ಸೀಲ್‍ಡೌನ್ ಹೇಗಿರಲಿದೆ?
* ಕಳೆದ 15 ದಿನಗಳಲ್ಲಿ ಸೋಂಕು ಹೆಚ್ಚಿದ ವಾರ್ಡ್‌ಗಳು ಸೀಲ್
* ಪಾಸಿಟಿವ್ ಹೆಚ್ಚಿರುವ ಕಡೆಗಳಲ್ಲಿ ಶೀಟ್‍ಗಳನ್ನು ಹಾಕಲಾಗುತ್ತದೆ.
* ಲಾಕ್‍ಡೌನ್‍ನಲ್ಲಿ ಕೊಂಚವಾದರೂ ರಿಲ್ಯಾಕ್ಸ್ ಇರುತ್ತದೆ
* ಆದರೆ ಸೀಲ್‍ಡೌನ್‍ನಲ್ಲಿ ಕಠಿಣ ನಿಯಮ ಜಾರಿ
* ಲಾಕ್‍ಡೌನ್‍ನಲ್ಲಿ ಕೊಂಚವಾದರೂ ರಿಲ್ಯಾಕ್ಸ್ ಇರುತ್ತೆ
* ಆದರೆ ಟಫ್ ಸೀಲ್‍ಡೌನ್‍ನಲ್ಲಿ ನೋ ರಿಲ್ಯಾಕ್ಸ್
* ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ
* ಹಣ ಪಾವತಿಸಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
* ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ
* ನಿಯಂತ್ರಿತ ವಲಯದ ಒಂದು ಕಡೆ ಮಾತ್ರ ಗೇಟ್ ಬಳಸಲು ತೀರ್ಮಾನ
* ಲಾಕ್‍ಡೌನ್ ಜಾಗದಲ್ಲಿ ಓಡಾಟಕ್ಕೆ ಅವಕಾಶ
* ಸೀಲ್‍ಡೌನ್ ಜಾಗದಲ್ಲಿ ಯಾವುದೇ ನಿಯಮ ಉಲ್ಲಂಘನೆಗೆ ಅವಕಾಶ ಇಲ್ಲ
https://youtu.be/I1U-UG-NHuk