ಮೈಸೂರು: ಮಾಸ್ಕ್ ಹಾಕದವರಿಂದ ಪೊಲೀಸರು ಸುಮಾರು ಅರ್ಧ ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ ಎಂದು ಮೈಸೂರು ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಮಾಹಿತಿ ನೀಡಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ ದಂಡದ ಜೊತೆ ಮಾಸ್ಕ್ ದಂಡ ಸೇರಿ ಇದೂವರೆಗೆ 56,77,950 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಈ ಮೂಲಕ ಮೈಸೂರು ಪೊಲೀಸರು ಮಾಸ್ಕ್ ದಂಡಾಸ್ತ್ರ ಉಪಯೋಗಿಸಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಮೊದಲು ರಸ್ತೆ ರಸ್ತೆಗಳಲ್ಲಿ ಜಾಗೃತಿ ಮೂಡಿಸುತ್ತಾರೆ. ಜಾಗೃತಿಯಿಂದ ಎಚ್ಚೆತ್ತುಕೊಳ್ಳದವರಿಗೆ ದಂಡ ಹಾಕುತ್ತಾರೆ. ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ದಂಡ ವಸೂಲಿ ಮಾಡುತ್ತಾರೆ. ಈವರೆಗೆ 26,380 ಕೇಸ್ ಗಳನ್ನು ಪೊಲೀಸರು ಹಾಕಿದ್ದಾರೆ. ಮೈಸೂರಿನ 22 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಕಾರ್ಯಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
Laxmi News 24×7