ಬೆಂಗಳೂರು,ಸೆ.19- ಶಾಸಕ ಮುನಿರತ್ನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳು ಕೇಳಿಬಂದಿದ್ದು, ಮಹಿಳೆಯೊಬ್ಬರು ತಮನ್ನು ಹೆದರಿಸಿ, ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಜೊತೆಗೆ ಎಚ್‌ಐವಿ ಪೀಡಿತ ಮಹಿಳೆಯೊಬ್ಬರನ್ನು ಬಳಸಿ ರಾಜಕೀಯ ಪ್ರತಿಸ್ಪರ್ಧಿಗೆ ಹನಿಟ್ರ್ಯಾಪ್ ಮಾಡಿರುವ ಗಂಭೀರ ಮಾಹಿತಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಶವಂತಪುರದ ಸಮಾಜಸೇವಕಿ ಸುಮಾರು 40 ವರ್ಷದ ಮಹಿಳೆ ಯೊಬ್ಬರು ನೀಡಿರುವ ದೂರಿನ ಆಧಾರದ ಮೇರೆಗೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 354 ಎ (ಲೈಂಗಿಕ ದೌರ್ಜನ್ಯ),354 ಸಿ (ಮಹಿಳೆಯರ ಇಚ್ಛೆಗೆ ವಿರುದ್ಧವಾಗಿ ಚಿತ್ರೆಕರಣ) 376 ಎನ್ (2) (ಸರ್ಕಾರಿ ಸೇವಕನಿಂದ ಅತ್ಯಾಚಾರ), 506 ( ಜೀವ ಬೆದರಿಕೆ), 504 ( ಉದ್ದೇಶಪೂರ್ವಕವಾಗಿ ನಿಂದನೆ) 120(ಬಿ) ಅಪರಾಧಿಕ ಒಳಸಂಚು, ( 149 ) ಕಾನೂನು ಬಾಹಿರ ಸಭೆ, 406 ( ನಂಬಿಕೆ ದೋಹ) , 384 ( ಸುಲಿಗೆ) 308 ( ಹತ್ಯೆ ಮಾಡಲು ಪ್ರಯತ್ನ,) ಐಟಿ ಆಕ್ಟ್ 66,66 ಇ ಸೆಕ್ಷನ್ಗಳನ್ನು ಎಫ್‌ಐಆರ್ನಲ್ಲಿ ಉಲ್ಲೇಖಿಸಲಾಗಿದೆ.