Breaking News

ಜೈಲಿನಲ್ಲಿ ಟಿವಿ ಬೇಕು ಎಂದಿದ್ದ ದಾಸನಿಗೆ, ಕೇವಲ ದೂರ ‘ದರ್ಶನ’ ವಷ್ಟೇ ವೀಕ್ಷಿಸಲು ಅವಕಾಶ : ಖಾಸಗಿ ವಾಹಿನಿಗಳಿಗೆ ಬ್ರೇಕ್!

Spread the love

ಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಸೆಲ್‌ಗೆ ಟಿವಿ ಸೌಲಭ್ಯ ನೀಡಲಾಗಿದೆ. ಟಿವಿಯಲ್ಲಿ ಕೇವಲ ಒಂದೇ ಒಂದು ಚಾನೆಲ್‌ ಬರಲಿದೆ. ಇನ್ನು ಖಾಸಗಿ ಚಾನೆಲ್‌ ನೋಡುವ ಮೂಲಕ ತನ್ನ ಸುದ್ದಿಗಳನ್ನು ತಿಳಿದುಕೊಳ್ಳಬೇಕು ಎಂಬ ನಟನ ಉದ್ದೇಶಕ್ಕೆ ನಿರಾಸೆಯಾಗಿದೆ.

ಜೈಲಿನಲ್ಲಿ ಟಿವಿ ಬೇಕು ಎಂದಿದ್ದ ದಾಸನಿಗೆ, ಕೇವಲ ದೂರ 'ದರ್ಶನ' ವಷ್ಟೇ ವೀಕ್ಷಿಸಲು ಅವಕಾಶ : ಖಾಸಗಿ ವಾಹಿನಿಗಳಿಗೆ ಬ್ರೇಕ್!

 

ಹೌದು ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪಗೆ ಟಿವಿ ನೋಡುವ ಸೌಲಭ್ಯ ಸಿಕ್ಕಿದೆ. ಹಲವು ದಿನಗಳ ಬೇಡಿಕೆಯ ಬಳಿಕ ಬಳ್ಳಾರಿ ಜೈಲನಲ್ಲಿ ನಟನ ಸೆಲ್‌ಗೆ ಟಿವಿ ಅಳವಡಿಕೆ ಕಾರ್ಯವು ಯಶಸ್ವಿಯಾಗಿದ್ದು, ಇದರೊಂದಿಗೆ ಮೊದಲ ಬೇಡಿಕೆ ಈಡೇರಿದಂತಾಗಿದೆ. ಆದರೆ ಇನ್ನು ನೀಡಲಾಗಿರುವ ಟಿವಿಯಲ್ಲಿ ಕೇವಲ ದೂರದರ್ಶನ ಚಾನೆಟ್‌ ಒಂದೇ ಲಭ್ಯವಾಗಲಿದೆ. ಯಾವುದೇ ಖಾಸಗಿ ಚಾನೆಲ್‌ಗಳ ವೀಕ್ಷಣೆಗೆ ಅವಕಾಶ ನೀಡಿಲ್ಲ.

ಟಿವಿ ಬಳಿಕ ದಿಂಬು, ಕುರ್ಚಿ ಬೇಕಂತೆ!

ದರ್ಶನ್ಗೆ ಜೈಲಿನಲ್ಲಿ ಬೆನ್ನು ನೋವು ಕಾರಣ ನೀಡಿ ಕೋರ್ಟ್ ನಲ್ಲಿ ಮನವಿ ಮಾಡಿ, ಕುರ್ಚಿಗೆ ಮನವಿ ಮಾಡಿದ್ದರು ಇದಕ್ಕೆ ಕೋರ್ಟ್ ಕೂಡ ಒಪ್ಪಿಕೊಂಡಿತ್ತು ಅದಾದ ಬಳಿಕ ಟಿವಿ ಬೇಡಿಕೆಟ್ಟಿದರು ಅದಕ್ಕೂ ಸಹ ಕೋರ್ಟ್ ಒಪ್ಪಿಗೆ ನೀಡಿತ್ತು ಆದರೆ ಬಳ್ಳಾರಿಯಲ್ಲಿ ಟಿವಿ ರಿಪೇರಿ ಗೆ ಬಂದಾಗ 10 ದಿನಗಳ ಕಾಲ ನಂತರ ಇದೀಗ ಮತ್ತೆ ದರ್ಶನ್ಗೆ ಟಿವಿ ನೋಡುವ ಭಾಗ್ಯ ದೊರೆತಿದೆ.

ಇದೀಗ ದರ್ಶನ್ ಮತ್ತೊಂದು ಹೊಸ ಬೇಡಿಕೆ ಇಟ್ಟಿದ್ದು, ಸೆಲ್‌ನಲ್ಲಿ ಕುಳಿತುಕೊಳ್ಳಲು ಕುರ್ಚಿ ಹಾಗೂ ಮೆತ್ತನೆಯ ತಲೆ ದಿಂಬು ನೀಡುವಂತೆ ಜೈಲು ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಬೇಡಿಕೆಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗದ ಮೊರೆ ಹೋಗಿದ್ದರು. ಸದ್ಯ ನ್ಯಾಯಾಲಯವು ಕುರ್ಚಿ ನೀಡಲು ಒಪ್ಪಿಗೆ ನೀಡಿದೆ. ಬುಧವಾರ ಅಥವಾ ಗುರುವಾರದಲ್ಲಿ ಪ್ಲಾಸ್ಟಿಕ್‌ ಕುರ್ಚಿಯು ನಟನ ಸೆಲ್‌ಗೆ ಸೆರಲಿದೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ