Breaking News

ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್

Spread the love

ಬೆಂಗಳೂರು: ನಟ ಉಪೇಂದ್ರ (Actor Upendra) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ‘ಬುದ್ಧಿವಂತ’ನ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಉಪ್ಪಿ ಕೂಡಾ ಕತ್ರಿಗುಪ್ಪೆಯ ತಮ್ಮ ಮನೆಯಲ್ಲಿ ಅಭಿಮಾನಿಗಳ ಜೊತೆಗೆ ಬರ್ತ್‌ಡೇ ಆಚರಿಸಲಿದ್ದಾರೆ.

 

ಈ ನಡುವೆಯೇ ಉಪೇಂದ್ರ ಅವರ ‘ಯುಐ’ (UI MOVIE) ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಆ ಕುರಿತಾದ ಅಪ್‌ ಡೇಟ್‌ ಕೂಡಾ ಹೊರಬಿದ್ದಿದೆ. ಕೊಂಬು ಇರುವ ಕುದುರೆ ಮೇಲೆ ಕೂತಿರುವ ಹೊಸ ಪೋಸ್ಟರ್‌ ರಿಲೀಸ್‌ ಮಾಡಿ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ ಉಪ್ಪಿ. ಇದೇ ಅಕ್ಟೋಬರ್‌ ತಿಂಗಳಿನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಹೇಳಿದೆ.

ಉಪೇಂದ್ರ ನಿರ್ದೇಶನದ ಸಿನಿಮಾ ಎಂದರೆ ಅಲ್ಲಿ ತಲೆಗೆ ಹುಳ ಬಿಡಲಾಗುತ್ತದೆ, ಮೊದಲ ವೀಕ್ಷಣೆಗೆ ಸಿನಿಮಾ ಅರ್ಥವಾಗಲ್ಲ, ತುಂಬಾ ಕನ್‌ಫ್ಯೂಸ್‌ ಮಾಡುತ್ತಾರೆ ಎಂಬುದು ಹಳೆಯ ವಾದ. ಆದರೆ, ‘ಯು-ಐ’ ವಿಚಾರದಲ್ಲಿ ಉಪೇಂದ್ರ ಬದಲಾಗಿದ್ದಾರೆ. ಹೊಸದೇನೋ ತೋರಿಸಲು ಹೊರಟಿದ್ದಾರೆ.

ಈ ಬಾರಿ ನೋ ಕನ್‌ಫ್ಯೂಸ್‌, ಕೇವಲ ಕನ್ವಿನ್ಸ್‌ ಎನ್ನಲಾಗುತ್ತಿದೆ. ಈ ಹಿಂದೆ ಉಪೇಂದ್ರ ಹೇಳಿದಂತೆ, ‘ನಾನು ಯಾವತ್ತೂ ಕನ್ವಿನ್ಸ್‌ ಮಾಡೋಕೇ ಚಿತ್ರ ಮಾಡೋದು. ಅದರೆ, ಕನ್‌ಫ್ಯೂ ಸ್‌ ಮಾಡ್ತೀನಿ ಅಂದುಕೊಳ್ಳುತ್ತಾರೆ. ಸತ್ಯನೇ ಗೊಂದಲ ಆಗಿಬಿಟ್ಟಿದೆ ನಮ್ಮ ಜನಕ್ಕೆ. ಅದು ಯಾರ ತಪ್ಪು. ಕನ್ವಿನ್ಸ್‌ ಆಗುವವರಿಗೆ ಕನ್ವಿನ್ಸ್‌ ಮಾಡುತ್ತೇನೆ. ಕನ್‌ ಫ್ಯೂಸ್‌ ಆಗುವವರು ಯಾವಾಗಲೂ ಕನ್‌ಫ್ಯೂಸ್‌ ಆಗಿಯೇ ಇರುತ್ತಾರೆ. ಸಿನಿಮಾ ದೃಶ್ಯ ಮಾಧ್ಯಮ. ದೃಶ್ಯ ನೋಡಿ ಕಲ್ಪನೆ ಮಾಡಿಕೊಳ್ಳಬೇಕು. ಒಬ್ಬ ಚಿತ್ರ ಕಲಾವಿದ ಒಂದು ಚಿತ್ರ ಬರೆಯುತ್ತಾನೆ. ಅದನ್ನು ಅವನೇ ಚೆನ್ನಾಗಿದೆ ಎಂದರೆ ಚೆನ್ನಾಗಿರುತ್ತದಾ? ನೀವು ನೋಡಿ ಹೇಳಿದರೆ ಅದಕ್ಕೊಂದು ಬೆಲೆ ಇರುತ್ತದೆ’ ಎನ್ನುವುದು ಉಪ್ಪಿ ಮಾತು.

 

 

 

ಪ್ರೇಕ್ಷಕರಿಗೆ ಹೊಸದೇನೋ ನೀಡಬೇಕೆಂದು ಚಿತ್ರತಂಡ ಪ್ರಯತ್ನಿಸುತ್ತಿದ್ದು, ಅದರ ಮೊದಲ ಹಂತವಾಗಿ ಹಾಡುಗಳ ಲೈವ್‌ ರೆಕಾರ್ಡಿಂಗ್‌ಗೆ ಹಂಗೇರಿಯಾದ ಬುಡಾಪೆಸ್ಟ್‌ಗೆ ತೆರಳಿದೆ. ಹಂಗೆರಿಯ ಪ್ರಮುಖ ನಗರ ಬುಡಾಪೆಸ್ಟ್‌ ನಲ್ಲಿ ಹಾಡಿನ ರೆಕಾರ್ಡ್‌ ಮಾಡಿದೆ. 90-ಪೀಸ್‌ ಆರ್ಕೆಸ್ಟ್ರಾ ಬಳಸಿ ಸಂಗೀತವನ್ನು ರೆಕಾರ್ಡ್‌ ಮಾಡುವ ಮೂಲಕ ಹಾಡಲ್ಲಿ ಹೊಸ ಫೀಲ್‌ ಸಿಗಲಿದೆ.

ಉಪೇಂದ್ರ ನಿರ್ದೇಶನದ ‌ʼಯುಐʼ ಸಿನಿಮಾಕ್ಕೆ ಕೆ.ಪಿ ಶ್ರೀಕಾಂತ್, ಜಿ.ಮನೋಹರನ್‌ ಬಂಡವಾಳ ಹಾಕಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ