ಧಾರವಾಡ: ನಗರದ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಗಳು ನೋಂದಣಿ ಮಾಡಿಸಲು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಕೆಲವೊಮ್ಮೆ ಕೌಂಟರ್ ಕೇಂದ್ರದ ಬಾಗಿಲಿನ ಹೊರಗೂ ರೋಗಿಗಳು ಸಾಲುಗಟ್ಟಿ ನಿಂತಿರುತ್ತಾರೆ.

ಧಾರವಾಡ ಜಿಲ್ಲೆಯವರು ಮಾತ್ರವಲ್ಲ ಬೆಳಗಾವಿ ಜಿಲ್ಲೆಯ ಕಿತ್ತೂರು, ಬೈಲಹೊಂಗಲ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ದಾಂಡೇಲಿ ಭಾಗದವರು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಬರುತ್ತಾರೆ.
ಪ್ರತಿನಿತ್ಯ ಸುಮಾರು 1300 ಹೊರರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.
ರೋಗಿ ಜತೆಗೆ ಬಂದವರು ಚೀಟಿ ಮಾಡಿಸಲು ಸಾಲಿನಲ್ಲಿ ನಿಲ್ಲುತ್ತಾರೆ. ರೋಗಿ ಒಬ್ಬರೇ ಬಂದಿದ್ದರೆ ಅವರೇ ಸಾಲಿನಲ್ಲಿ ನಿಲ್ಲಬೇಕು. ಹೊರ ಊರುಗಳಿಂದ ಬಂದವರು ಚೀಟಿ ಮಾಡಿಸಿ ವೈದ್ಯರು ಸಿಗದಿದ್ದರೆ ಮತ್ತೊಂದು ದಿನ ಬರಬೇಕು. ನೋಂದಣಿ ಕೌಂಟರ್ ಕೇಂದ್ರದಲ್ಲಿ ಸಂದಣಿ ಹೆಚ್ಚು ಇದ್ದರೆ ಬಾಗಿಲಿನ ಹೊರಗೆ ಬಿಸಿಲಿನಲ್ಲಿ ಕಾಯಬೇಕು.
ಪ್ರವೇಶ ದ್ವಾರದ ಸಮೀಪದ ನೋಂದಣಿ ಕೇಂದ್ರದಲ್ಲಿ ಆರು ಕೌಂಟರ್‌ಗಳು ಇವೆ. ಆಸ್ಪತ್ರೆಯ ಇತರ ವಿಭಾಗಗಳಲ್ಲಿ ಮೂರು ಕೌಂಟರ್‌ಗಳು ಇವೆ. ಬೆಳಿಗ್ಗೆ ಸಂಜೆಯವರೆಗೆ ಕೌಂಟರ್‌ಗಳು ಕಾರ್ಯನಿರ್ವಹಿಸುತ್ತವೆ. ಒಂದು ಕೌಂಟರ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.
Laxmi News 24×7