ಪಣಜಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ, ರಾಜ್ಯ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೃಣಾಲ್ ಮತ್ತು ಭದ್ರಾವತಿಯ ಬಿ.ಕೆ.ಶಿವಕುಮಾರ ಪುತ್ರಿ ಡಾ.ಹಿತಾ ವಿವಾಹ ಗೋವಾದ ಲೀಲಾ ಪ್ಯಾಲೇಸ್ ಹೊಟೆಲ್ ನಲ್ಲಿ ಇದೀಗ ನೆರವೇರಿದೆ.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖಂಡರಾದ ಯು.ಟಿ.ಖಾದರ್, ಈಶ್ವರ ಖಂಡ್ರೆ ಸೇರಿದಂತೆ ನೂರಾರು ಗಣ್ಯರ ಸಮ್ಮುಖದಲ್ಲಿ ಮೃಣಾಲ್ ಅವರು ಹಿತಾ ಅವರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು.
ಕಳೆದ 4 ದಿನಗಳಿಂದ ವಿವಾಹ ಪೂರ್ವ ಕಾರ್ಯಕರ್ಮಗಳೆಲ್ಲ ನಡೆದು ಶುಕ್ರವಾರ ವಿವಾಹ ಶಾಸ್ತ್ರ ನೆರವೇರಿತು.

Laxmi News 24×7