Breaking News

ಜೈಲಿನಲ್ಲಿ ಹೇಗಿರಬೇಕು? ವಕೀಲರಿಂದ ದರ್ಶನ್‌ಗೆ ಪತ್ರ

Spread the love

ಳ್ಳಾರಿ: ಇಲ್ಲಿನ ಕಾರಾಗೃಹದಲ್ಲಿ ಇರುವ ಕೊಲೆ ಆರೋಪಿ, ನಟ ದರ್ಶನ್‌ಗೆ ವಕೀಲರ ತಂಡವು ಪತ್ರ ಬರೆದು ‘ಜೈಲಿನಲ್ಲಿ ಹೇಗಿರಬೇಕು’ ಎಂಬ ಬಗ್ಗೆ ಸಲಹೆ, ಸೂಚನೆ ನೀಡಿದೆ. ಕೈದಿಗಳಿಗೆ ಕುಟುಂಬಸ್ಥರು, ವಕೀಲರು ಪತ್ರ ಬರೆಯಲು ಅವಕಾಶವಿದೆ. ಕಾರಾಗೃಹದ ಅಧಿಕಾರಿಗಳು ಪತ್ರವನ್ನು ಪರಿಶೀಲಿಸಿ, ದರ್ಶನ್‌ಗೆ ನೀಡಿದ್ದಾರೆ.

ಜೈಲಿನಲ್ಲಿ ಹೇಗಿರಬೇಕು? ವಕೀಲರಿಂದ ದರ್ಶನ್‌ಗೆ ಪತ್ರ

‘ವಕೀಲರಿಂದ ಬಂದಿರುವ ಪತ್ರದಲ್ಲಿ ಕೆಲವಷ್ಟು ವೈಯಕ್ತಿಕ ವಿಚಾರಗಳಿವೆ. ಪತ್ರದ ಜೊತೆ ಭಗವದ್ಗೀತೆ ಕಳುಹಿಸಿರುವ ಬಗ್ಗೆ ಉಲ್ಲೇಖವಿದೆ. ಆದರೆ, ಅದು ಪತ್ತೆಯಾಗಿಲ್ಲ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು.

‘ದರ್ಶನ್‌ಗೆ ಟಿವಿ ಕೊಡಲು ನಿರ್ಧರಿಸಲಾಗಿದೆ. ಆದರೆ, ಬೆರಳು ತೋರಿಸಿದ ಘಟನೆಯಿಂದ ಟಿ.ವಿ ನೀಡುವುದು ವಿಳಂಬ ಮಾಡಲಾಗಿದೆ. ಇದು ಶಿಕ್ಷೆಯ ಕ್ರಮವೇನಲ್ಲ. ಆದರೆ, ಅವರಿಗೆ ಟಿವಿ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಭೇಟಿಗೆ ಇಂಥವರೇ ಬರಬೇಕೆಂದು ದರ್ಶನ್‌ ಕೇಳಿಲ್ಲ. ಈ ವಾರ ಜೈಲಿಗೆ ಅವರ ಕುಟುಂಬದಿಂದ ಯಾರು ಬರುತ್ತಿದ್ದಾರೆ ಎಂಬ ಬಗ್ಗೆ ಸದ್ಯ ಮಾಹಿತಿ ಇಲ್ಲ’ ಎಂದು ಅವರು ತಿಳಿಸಿದರು.


Spread the love

About Laxminews 24x7

Check Also

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಐವರು ಬಾಣಂತಿಯರು ಸಾವು

Spread the loveಬಳ್ಳಾರಿ, ನವೆಂಬರ್ 28: ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಒಟ್ಟು ಐವರು ಬಾಣಂತಿಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ