Breaking News

ದೇವರಿಗೂ ಕಳ್ಳರ ಕಾಟ: ಗಣಪತಿ ಮೂರ್ತಿಯನ್ನೇ ಕದ್ದೊಯ್ದ ಖದೀಮರು

Spread the love

ಬೆಂಗಳೂರು: ಮನೆಗಳ್ಳತನ, ಸರಗಳ್ಳತನ, ಹಣ, ಬೈಕ್ ಕಳ್ಳತನ ಮಾಡುವವರನ್ನು, ದೇವರ ಮೂರ್ತಿ ಮೇಲಿನ ಚಿನ್ನಾಭರಣಗಳನ್ನು ಕದಿಯುವವರನ್ನು ನೊಡಿದ್ದೇವೆ. ಆದರೆ ಇದೀಗ ದೇವರ ಮೂರ್ತಿಯನ್ನೂ ಕಳ್ಳರು ಬಿಡುತ್ತಿಲ್ಲ. ಕಳ್ಳರಿಗೆ ದೇವರ ಮೇಲೂ ಸ್ವಲ್ಪವೂ ಭಯ-ಭಕ್ತಿ ಎಂಬುದು ಇದ್ದಂತಿಲ್ಲ.

ದೇವರಾದರೇನು? ಯಾರಾದರೇನು? ಕದಿಯುವುದೇ ಕಾಯಕವನ್ನಾಗಿ ಮಾಡಿಕೊಂಡಿರುವ ಖದೀಮರು ಗಣಪತಿಯ ಮೂರ್ತಿಯನ್ನೇ ಕದ್ದು ಪರಾರುಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದೇವರಿಗೂ ಕಳ್ಳರ ಕಾಟ: ಗಣಪತಿ ಮೂರ್ತಿಯನ್ನೇ ಕದ್ದೊಯ್ದ ಖದೀಮರು

ಬ್ಯಾಡರಾಯನಹಳ್ಳಿಯ ಅಂದ್ರಳ್ಳಿ ಮುಖ್ಯ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ರಾತ್ರೋರಾತ್ರಿ ಗಣಪತಿ ಮೂರ್ತಿಯನ್ನು ಕ್ಷಣಾರ್ಧದಲ್ಲಿ ಕದ್ದು ಎಸ್ಕೇಪ್ ಆಗಿದ್ದಾರೆ.

ಗಣೇಶ ಉತ್ಸವಕ್ಕಾಗಿ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಡಲಾಗಿತ್ತು. ರಾತ್ರಿ ವೇಳೆ ವ್ಯಾಪಾರಿ ಗಣಪತಿ ಮೂರ್ತಿಗಳಿಗೆ ಟಾರ್ಪಲ್ ನಿಂದ ಮುಚ್ಚಿ ಹೋಗಿದ್ದರು. ಆದರೆ ಬೈಕ್ ನಲ್ಲಿ ಬಂದ ಕಳ್ಳರು ಒಂದು ಗಣಪತಿ ಮೂರ್ತಿ ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬ್ಯಾಡರಾಯನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ