ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಶ್ರೀ ಕಾಳಿಕಾ ದೇವಸ್ಥಾನದ ಬ್ರಹ್ಮಾನಂದ ಮಠದಲ್ಲಿ ಕಾಳಿಕಾಂಬೆಂಯ ಕಂದ ಗುರು ಬ್ರಹ್ಮಾನಂದ ಎಂಬ ಭಕ್ತಿಗೀತೆಗಳ ಸಿ ಡಿ ಯನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಶ್ರೀಗಳು ಅರುಣ ಐಹೋಳೆ ಮತ್ತು ಮುಕುಂದ ಮಠದ ನೇತೃತ್ವದಲ್ಲಿ ರಚಿಸಿದ ಶ್ರೀ ಬ್ರಹ್ಮಾನಂದ ಗುರುಗಳ ಭಕ್ತಿ ಗೀತೆಗಳು ಚನ್ನಾಗಿ ಮೂಡಿಬಂದಿವೆ ಎಂದರು ,
ರಾಯಬಾಗ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅರುಣ ಐಹೋಳೆ ಕಲಾವಿದರಾದ ಶಬ್ಬೀರ ಡಾಂಗೆ, ಸಿದ್ದು ಮಳಾಜ, ಶ್ರೀಶೈಲ ಕಾಗಲ, ಪ್ರೀಯಾ ತಾಳಿಕೋಟಿ, ಮಹಾನಂದ ಗೋಸಾನಿ, ಹಾಗೂ ಶ್ರೀ ಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಯರನಾಳ ಬ್ರಹ್ಮಾನಂದ ಅಜ್ಜನವರ ಮಠದ ಶಿಷ್ಯರು ಭಕ್ತರು ಉಪಸ್ಥಿತರಿದ್ದರು.
Laxmi News 24×7