Breaking News

ಮನೆಯಲ್ಲಿ ವನ್ಯಜೀವಿ ಮಾಂಸ, ಜಿಂಕೆ ಕೊಂಬು ಪತ್ತೆ: ಇಬ್ಬರ ಬಂಧನ

Spread the love

ಖಾನಾಪುರ: ತಾಲ್ಲೂಕಿನ ಗೋಟಗಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾಂಬೇಗಾಳಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವನ್ಯಜೀವಿ ಮಾಂಸ ಮತ್ತು ಜಿಂಕೆ ಕೊಂಬುಗಳನ್ನು ಅರಣ್ಯ ಅಧಿಕಾರಿಗಳು ಗುರುವಾರ ಪತ್ತೆಹಚ್ಚಿ, ಇಬ್ಬರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಜಾಂಬೇಗಾಳಿ ಗ್ರಾಮದ ಮಹ್ಮದಲಿ ಹಲಸಿಕರ, ಮೌಲಾಲಿ ಹಲಸಿಕರ ಎಂಬುವವರನ್ನು ಬಂಧಿಸಿದ್ದಾರೆ.

 

ಬಂಧಿತರಿಂದ ಕಾಡುಕೋಣದ ಮಾಂಸ ಮತ್ತು ಜಿಂಕೆಯ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಮತ್ತು ದಾಳಿ ಸಂದರ್ಭದಲ್ಲಿ ದೊರೆತ ವಸ್ತುಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ನಾಗರಗಾಳಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಪ್ರಕರಣ ದಾಖಲಾಗಿದೆ.

ನಾಗರಗಾಳಿ ಉಪ ವಿಭಾಗದ ಎಸಿಎಫ್ ಶಿವಾನಂದ ಮಗದುಮ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ನಾಗರಗಾಳಿ ಆರ್.ಎಫ್.ಒ ಪ್ರಶಾಂತ ಮಂಗಸೂಳಿ, ಕೇದಾರ ತೇಲಂಗಿ, ಸಂತೋಷ ಗೌಡರ, ಲಚ್ಯಾಣ, ಪ್ರವೀಣ ಕಮ್ಮಾರ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ