ದರ್ಶನ್ ಜೈಲಿನಲ್ಲಿ ಇದ್ದರೂ ಕೂಡ ದುರಹಂಕಾರ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದರೂ ಕೂಡ ದಾಸನ ದಿಮಾಕು ಮಾತ್ರ ಕೊಂಚವೂ ಇಳಿಕೆಯಾದಂತೆ ಕಾಣಿಸುತ್ತಿಲ್ಲ. ಮಾಧ್ಯಮಗಳನ್ನು ನೋಡಿ ದರ್ಶನ್ ಅಸಭ್ಯವಾಗಿ ಕೈ ಸನ್ನೆ ಮಾಡಿದ್ದು ಕ್ಯಾಮಾರದಲ್ಲಿ ಸೆರೆಯಾಗಿದೆ.
ಹೌದು… ಕಳೆದ ದಿನ (ಸೆಪ್ಟೆಂಬರ್ 12) ಚಾರ್ಜ್‌ಶೀಟ್ ಪ್ರತಿ ಸಮೇತ ವಕೀಲರ ಜೊತೆ ವಿಜಯಲಕ್ಷ್ಮಿ ಕುಟುಂಬ ಬಳ್ಳಾರಿ ಜೈಲಿಗೆ ಭೇಟಿ ನೀಡಿತ್ತು. ವಕೀಲರ ಜೊತೆ ಕಾನೂನು ಸಮರದ ಬಗ್ಗೆ ಚರ್ಚಿಸಿ ವಾಪಸ್ಸು ಶೆಲ್‌ಗೆ ಹೋಗುವಾಗ ಮಾಧ್ಯಮಕ್ಕೆ ಈ ಕಿಲ್ಲರ್ ಹೀರೋ ಅಸಭ್ಯ ಕೈ ಸನ್ನೆ ಮಾಡಿದ್ದಾನೆ.
ಇದೇ ವೇಳೆ ಫ್ಯಾನ್ಸ್ ಕೂಡ ದಾಸ ನಡೆಯೋದನ್ನು ನೋಡಿ ಹೌದು ಹುಲಿಯಾ ಎಂದು ಕೂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ದರ್ಶನ್ ಜೈಲಿಗೆ ಹೋದ ಬಳಿಕೆ ದೇಹದ ತೂಕ ಸ್ವಲ್ಪ ಕಡಿಮೆ ಆಗಿರಬಹುದೆನೋ? ಆದರೆ ಸೊಕ್ಕು ಮಾತ್ರ ಹಾಗೇ ಇದೆ. ಬಹುಶ: ಪೊಲೀಸರು ಲಾಠಿ ರುಚಿ ತೋರಿಸಿಲ್ಲ ಅಂತ ಕಾಣಿಸುತ್ತದೆ. ಅಥವಾ ತೋರಿಸಿದ್ದರೂ ಕೂಡ ಮರೆತು ಹೋಗಿರಬೇಕು ಅಂತ ಅನಿಸುತ್ತದೆ.
ದರ್ಶನ್‌ಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಗೊಂಡಿದೆ. ಕಳೆದ ದಿನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಒಬ್ಬ ವಕೀಲರನ್ನು ಕರೆದುಕೊಂಡು ದರ್ಶನ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಹೋಗಿ ಬಂದಿದ್ದ ವಿಜಯಲಕ್ಷ್ಮಿ ಆ ಪ್ರಸಾದವನ್ನು ದರ್ಶನ್‌ಗೆ ನೀಡಿದ್ದಾರೆ. ಕುಟುಂಬಸ್ಥರೊಂದಿಗೆ ಮಾತನಾಡಿದ ಬಳಿಕ ಶೆಲ್‌ಗೆ ಹೋಗುತ್ತಿದ್ದಾಗ ದರ್ಶನ್ ಮಾಧ್ಯಮದವರನ್ನು ನೋಡುತ್ತಿದ್ದಂತೆ ತನ್ನ ಎರಡು ಕೈಗಳಲ್ಲಿ ಮಿಡಲ್ ಫಿಂಗರ್ ತೋರಿಸುತ್ತಾನೆ.
ಅಂದಹಾಗೆ ಮಿಡಲ್ ಫಿಂಗರ್ ತೋರಿಸುವುದು ಅನೇಕರಿಗೆ ಅದ್ರಲೇನಿದೆ ಅಂಥ ಅರ್ಥ ಅಂತ ಅನಿಸಬಹುದು. ಆದರೆ ಮಿಡಲ್ ಫಿಂಗರ್ ತೋರಿಸುವುದು ಅಶ್ಲೀಲವಾದ ಚಿಹ್ನೆ. ಈ ಚಿಹ್ನೆಯನ್ನು ತೋರಿಸಿದ್ದು ಆತ ಮಾಧ್ಯಮದವರನ್ನು ನೋಡಿದಾಗ. ಈತನಿಗೆ ಅಹಂಕಾರದ ಮದ ಇನ್ನೂ ಕೂಡ ಕಡಿಮೆ ಆಗಿಲ್ಲ ಅಂತ ಈ ವಿಡಿಯೋ ನೋಡಿದ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಹೌದು…. ದರ್ಶನ್ ಅಹಂಕಾರ ಕಡಿಮೆ ಆಗುವುದಾದರೆ ಮೊದಲೇ ಜೈಲಿಗೆ ಹೋಗಿ ಬಂದಾಗಲೇ ಆಗಬೇಕಿತ್ತು. ಜೀವನ, ಜಗತ್ತು ಅಂದರೇನು ಅನ್ನೋದು ತಿಳಿದಿರಬೇಕಿತ್ತು. ಬೆಂಬಲಿಸೋರು ಎಷ್ಟು ದಿನ ಜೊತೆಗೆ ಇರುತ್ತಾರೆ ಅನ್ನೋದು ದರ್ಶನ್‌ಗೆ ಅರ್ಥ ಆಗಿರಬೇಕಿತ್ತು. ಅಂತಿಮವಾಗಿ ನಮ್ಮ ಬೆಂಬಲಕ್ಕೆ ನಿಂತುಕೊಳ್ಳುವವರು ಯಾರು ಎಂದು ಎಲ್ಲವೂ ಜ್ಞಾನೋದಯವಾಗಬೇಕಿತ್ತು. ಆದರೆ ದರ್ಶನ್‌ಗೆ ಜೈಲಿಗೆ ಒಂದು ಬಾರಿ ಹೋಗಿ ಬಂದ ಬಳಿಕವೂ ಈ ಜ್ಞಾನೋದಯ ಆಗಲಿಲ್ಲ. ಮುಂದೆ ಕೂಡ ಆಗುವುದಿಲ್ಲ ಅಂತ ಕಾಣಿಸುತ್ತದೆ