ಗದಗ: ಹಿಂದೂ (Hindu) ಯುವತಿಯರನ್ನು ಮುಸ್ಲಿಂ (Muslim) ಯುವಕರು ಪ್ರೀತಿಸಿ ಮತಾಂತರಿಸಿ ಲವ್ ಜಿಹಾದ್ (Love Jihad) ನಡೆಸುತ್ತಿದ್ದಾರೆ ಎಂಬ ಆರೋಪ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಹೀಗಾಗಿ ಲವ್ ಜಿಹಾದ್ ಅನ್ನ ತಡೆಯಬೇಕು (Preventing Love Jihad) ಎಂಬ ಉದ್ದೇಶದಿಂದ ಕೆಲ ರಾಜ್ಯ ಸರ್ಕಾರಗಳು, ಬಿಜೆಪಿ, ಆರ್ಎಸ್ಎಸ್ ಕೂಡ ಹಲವು ಬಾರಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದನ್ನ ನಾವು ನೋಡಿದ್ದೇವೆ.
ಈಗ ರಾಜ್ಯದಲ್ಲೂ ಇಂತದ್ದೇ ಒಂದು ಜಾಗೃತಿ (Awareness) ಕಾರ್ಯಕ್ರಮ ಜರುಗಿದೆ.
ಲವ್ ಜಿಹಾದ್ ವಿರುದ್ಧ ರಣ ಕಹಳೆ
ಗದಗದ ಬೆಟಗೇರಿಯಲ್ಲಿ ಲವ್ ಜಿಹಾದ್ ವಿರುದ್ಧ ರಣ ಕಹಳೆ ಮೊಳಗಿಸಿದ್ದು. ಲವ್ ಜಿಹಾದ್ಗೆ ಬಲಿಯಾಗದಂತೆ ಆಣೆ ಪ್ರಮಾಣ ಮಾಡಿಸಿವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಬೆಟಗೇರಿಯಲ್ಲಿ ಕ್ರಾಂತಿ ಸೇನೆ ವತಿಯಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಲವ್ ಜಿಹಾದಕ್ಕೆ ಬಲಿಯಾಗದಂತೆ ಆಣೆ ಪ್ರಮಾಣವನ್ನು ಮಾಡಿಸುವ ಮೂಲ ಹಿಂದೂ ಯುವತಿಯರನ್ನು ರಕ್ಷಣೆ ಮಾಡಬೇಕು ಎಂದು ಜಾಗೃತಿ ಮೂಡಿಸಲಾಗಿದೆ.
ಗಣೇಶ, ಶ್ರೀ ರಾಮ ದೇವರ ಹೆಸರಿನಲ್ಲಿ ಆಣೆ ಪ್ರಮಾಣ
ಹಿಂದೂ ಮಹಾಗಣಪತಿ ಪ್ರತಿಷ್ಟಾಪನೆ ಹಿನ್ನಲೆಯಲ್ಲಿ ಹಿಂದೂ ಜನ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಹಿಂದೂಗಳು ಸಾಮೂಹಿಕವಾಗಿ ಆಣೆ ಪ್ರಮಾಣ ಮಾಡಿದ್ದಾರೆ. ಹಿಂದೂ ಸಮಾಜದ ಯುವತಿಯರು, ಮಹಿಳೆಯರು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಗಣೇಶನ ಪ್ರತಿಷ್ಠಾಪನೆ ಅಂಗವಾಗಿ ನಡೆದ ಹಿಂದೂ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಹಿಂದೂ ಯುವತಿಯರು ಹಾಗೂ ಮಹಿಳೆಯರು ಲವ್ ಜಿಹಾದಗೆ ಬಲಿಯಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಲವ್ ಜಿಹಾದಕ್ಕೆ ಒಳಗಾಗಬಾರದು ಎಂದು ಶ್ರೀ ಗಣೇಶ ಮತ್ತು ಶ್ರೀ ರಾಮ ದೇವರ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ.