Breaking News

ಲಿಂಗಾಯತ ಸಮುದಾಯ 2A ಗೆ ಸೇರಿಸದಿದ್ರೆ ಉಗ್ರ ಹೋರಾಟ: ಮೃತ್ಯುಂಜಯ ಸ್ವಾಮಿ

Spread the love

ಬೆಂಗಳೂರು : ಪಂಚಮಸಾಲಿ ಲಿಂಗಾಯತ ಸಮುದಾಯವನ್ನು 2ಎಗೆ ಸೇರಿಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರವಿದೆ.
ಸಿಎಂ ತಮ್ಮ ಅಧಿಕಾರ ಬಳಸಿ ಈ ಕೆಲಸ ಮಾಡಬಹುದು. ಓಬಿಸಿ ಸೇರಿಸೋದನ್ನ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಅಂತಾ ಬಸವ ಜಯಮೃತ್ಯುಂಜಯ ಸ್ವಾಮೀಜಿ  ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 28ರಂದು ನಾವು ಸತ್ಯಾಗ್ರಹ ಮಾಡಿದ್ಧೇವು. ನಾನು ಸಿಎಂ ಭೇಟಿಯಾಗಿದ್ದೆ. ನವೆಂಬರ್ 28ರ ಒಳಗೆ ಬೇಡಿಕೆ ಈಡೇರಿಸೋದಾಗಿ ಭರವಸೆ ನೀಡಿದ್ದಾರೆ. ಸಿಎಂ ತಮ್ಮ ಅಧಿಕಾರ ಬಳಸಿ ಈ ಕೆಲಸ ಮಾಡಬಹುದು. ಓಬಿಸಿ ಸೇರಿಸೋದನ್ನ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಅಂತಾ ಆಗ್ರಹಿಸಿದರು.

ನಿನ್ನೆ ಸಿಎಂ ನಮಗೆ ಭರವಸೆ ನೀಡಿದ್ದರು. ಸಿಎಂ ಕೂಡ ಎರಡನೇ ದಿನಗಳಲ್ಲಿ ಸಿಹಿ ಸುದ್ದಿ ಕೊಡೋದಾಗಿ ಹೇಳಿದ್ದರು. ಆದರೆ ಈಗ ಯಾಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದರು. ನಾವು ಈಗಲೂ ನೀರಿಕ್ಷೆಯಲ್ಲಿದ್ದೇವೆ ಸಚಿವ ಸಂಪುಟ ಚರ್ಚೆ ಆಗಬಹುದು ಎಂಬ ನಿರೀಕ್ಷೆ ಇದೆ ಎಂದರು.

ಸಚಿವ ಸಂಪುಟ ಸಭೆ ಬಳಿಕ ಸಿಎಂ ಸುದ್ದಿಗೋಷ್ಠಿ ನಡೆಸಿ, ಸಿಎಂ ಘೋಷಣೆ ಮಾಡದಿದ್ದರೆ ಮುಂದಿನ ಹೋರಾಟದ ರೂಪುರೇಷೆ ಹೇಳುತ್ತೇವೆ. ನಮ್ಮ ಹೋರಾಟದ ಬಗ್ಗೆ  ಸುದ್ದಿಗೋಷ್ಠಿ ಮಾಡಿ, ಹೇಳುತ್ತೇವೆ. ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ