ಮುಂಬೈ: ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ, ಮಾಡೆಲ್ ನತಾಶಾ ಸ್ಟಾಂಕೋವಿಕ್ ಮುಂಬೈನಲ್ಲಿದ್ದು, ಆಕೆ ಗೆಳೆಯ ಅಲೆಕ್ಸಾಂಡರ್ ಇಲಾಕ್ ಜೊತೆ ಸುತ್ತಾಟ ನಡೆಸುತ್ತಿದ್ದು ಗಮನಸೆಳೆಯುತ್ತಿದ್ದಾಳೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿದೆ.
ನತಾಶಾ ಎರಡು ತಿಂಗಳ ಕಾಲ ಸರ್ಬಿಯಾದಲ್ಲಿ ತಂಗಿದ್ದು ಆಕೆ ಈಗ ಮುಂಬೈಗೆ ಬಂದಿದ್ದಾಳೆ. ಆದರೆ, ಆಕೆಯ ಜೊತೆ ಆಕೆಯ ಗೆಳೆಯ ಅಲೆಕ್ಸಾಂಡರ್ ಇಲಾಕ್ ಕೂಡ ಇರುವುದು ಗಮನಾರ್ಹ ಸಂಗತಿಯಾಗಿದೆ.
ಇಬ್ಬರೂ ಮುಂಬೈನ ಬೀದಿಗಳಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಳಿ ಬಣ್ಣದ ಜಾಕೆಟ್ ಧರಿಸಿರುವ ನತಾಶಾ ಜಿಮ್‌ನಲ್ಲಿ ಫೋಟೋಗ್ರಾಫರ್‌ಗಳಿಗೆ ಪೋಸ್ ನೀಡಿದ್ದಾರೆ. ಬಳಿಕ ಆಕೆಯೇ ಕಾರನ್ನು ಚಲಾಯಿಸಿದ್ದಾಳೆ.
ಹಾರ್ದಿಕ್ ಜೊತೆಗಿನ ಸಂಬಂಧ ಮುರಿದು ಬಿದ್ದ ನಂತರ ನತಾಶಾ ಸರ್ಬಿಯಾಗೆ ಹಾರಿದ್ದಳು. ಅಲ್ಲಿ ಆಕೆ ತನ್ನ ಮಗ ಅಗಸ್ತ್ಯನ ನಾಲ್ಕನೇ ಹುಟ್ಟುಹಬ್ಬವನ್ನು (ಜುಲೈ 30 ರಂದು) ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಿದ್ದಳು. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಳು.