ಶಿವಮೊಗ್ಗ ಸೆಪ್ಟೆಂಬರ್ 12: ಮಂಡ್ಯ ನಾಗಮಂಗಲ ಗಲಾಟೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ವಿರುದ್ಧ ವಿಪಕ್ಷಗಳ ವಾಗ್ದಾಳಿಗೆ ಕಾರಣವಾಗಿದೆ. ಮಂಡ್ಯ ಗಲಭೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ದೂರಲಾಗುತ್ತಿದೆ. ಈ ಬಗ್ಗೆ ಶಾಸಕ ಚನ್ನಬಸಪ್ಪ ಪ್ರತಿಕ್ರಿಯೆ ನೀಡಿದ್ದು ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಶಾಸಕ ಚನ್ನಬಸಪ್ಪ, ನಾಗಮಂಗಲ ಗಲಾಟೆ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಇಡೀ ಹಿಂದೂ ಸಮಾಜವನ್ನ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ. ಹಿಂದೂ ಸಮಾಜದ ಮೇಲೆ ಸರ್ಕಾರವೇ ಗದಪ್ರಹಾರ ಮಾಡ್ತಿದೆ. ಸರ್ಕಾರ ನಡೆದುಕೊಳ್ಳುವ ರೀತಿ ಸರಿ ಇಲ್ಲ ಎಂದು ಕಿಡಿ ಕಾರಿದರು.
ಹಿಂದೂ ಸಮಾಜದ ಮೇಲೆ ಸರ್ಕಾರನೇ ಈ ರೀತಿ ಗದಪ್ರಹಾರ ಮಾಡ್ತಿದೆ. ಗಲಾಟೆ ಮಾಡುವವರಿಗೆ ಶಕ್ತಿ, ಕುಮ್ಮಕ್ಕು ನೀಡುವ ಕೆಲಸ ಸರ್ಕಾರ ಮಾಡ್ತಿದೆ. ನಾಗಮಂಗಲ ಗಲಾಟೆ ನೋಡಿದ್ರೆ ಭಯ ಆಗುತ್ತದೆ. ಆದರೆ ಹಿಂದೂಗಳು ಭಯಪಡುವುದಿಲ್ಲ. ನಾಗಮಂಗಲ ಮಸೀದಿಯಿಂದ ತಲವಾರ ಬರುತ್ತದೆ. ಈ ರೀತಿಯ ಭಯ ವಾತಾವರಣ ಸೃಷ್ಟಿ ಮಾಡಿ, ಹಿಂದೂ ಸಮಾಜವನ್ನ ಕಗ್ಗೊಲೆ ಮಾಡಬಿಡ್ತಿವಿ ಅಂತಾ ಎದುರಿಸುತ್ತಿದ್ರೆ. ಇಲ್ಲಿ ಯಾರು ಎದುರುವುದಿಲ್ಲ.