ಬೆಂಗಳೂರು: ಬೆಂಗಳೂರಲ್ಲಿ ಮೊಟ್ಟಲ ಮೊದಲ ಬಾರಿ ಎನ್ನುವಂತೆ ಉದ್ಯಮಿಯೊಬ್ಬರಿಂದ ಹಣ ಪಡೆದು ಪರಾರಿಯಾಗಿದ್ದಂತ ನಾಲ್ವರು ಕೇಂದ್ರದ ಜಿಎಸ್ಟಿ ಅಧಿಕಾರಿಗಳನ್ನು ಪೊಲೀಸರು ಭರ್ಜರಿ ಬೇಟೆಯಾಡುವ ಮೂಲಕ ಬಂಧಿಸಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಪೊಲೀಸರಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ದಿನಾಂಕ:09-09-2024 ರಂದು ಸಂಜೆ 16-35 ಗಂಟೆಗೆ ಪಿರಾದುದಾರರಾದ ಕೇಶವ್ ಟಾಕ್ ರವರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, Mexo Solutions Private Limited having its address at L4, 2nd Floor, 11th Sector, Jeevan Bhimanagar Main Road, Bengaluru-560075 0 ಮಾಡಿಕೊಂಡಿರುತ್ತೇನೆ.
ದಿನಾಂಕ:30-08-2024 ರಂದು 8-30 ರಿಂದ 9-00 ಗಂಟೆ ನಡುವೆ ಅಪರಿಚಿತ ವ್ಯಕ್ತಿಗಳು ತಾವು ಜಿಎಸ್‌ಟಿ ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು, ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿ ನಮ್ಮ ಮೊಬೈಲ್ ಫೋನ್ ಮತ್ತು ಇತರೆ ವಸ್ತುಗಳನ್ನು ತೆಗೆದುಕೊಂಡು ನನ್ನನ್ನು ಪವನ್ ತಕ್, ಮುಖೇಶ್ ಜೈನ್, ರಾಕೇಶ್ ಮಾಣಕ್ ಚಾಂದನಿ ರವರುಗಳನ್ನು ಬಲವಂತವಾಗಿ ಮನೆಯಿಂದ ಎಳೆದುಕೊಂಡು ಬಂದು ಮಹೀಂದ್ರಾ ಎಕ್ಸ್ಯುವಿ 500 ಮತ್ತು ಟಾಟಾ ಹ್ಯಾರಿಯರ್ ಎಸ್‌ಯುವಿ ಕಾರುಗಳಲ್ಲಿ ಕೂರಿಸಿಕೊಂಡು ನಾನು ಕೆಲಸ ಮಾಡುತ್ತಿರುವ ಕಛೇರಿಗೆ ಬಂದು ನಮ್ಮ ಮೇಲೆ ಹಲ್ಲೆ ಮಾಡಿ ನಮ್ಮಗಳನ್ನು ಪ್ರತ್ಯೇಕ ರೂಂಗಳಲ್ಲಿ ಕೂಡಿ ಹಾಕಿರುತ್ತಾರೆ ಎಂದು ದೂರಿನ ಸಾರಾಂಶ ತಿಳಿಸಿದೆ.
ನಂತರ ಮತ್ತೊಬ್ಬ ವ್ಯಕ್ತಿ ತಾನು ಮನೋಜ್ ಸೀನಿಯರ್ ಜಿಎಸ್ ಆಫೀಸರ್ ಎಂದು ಹೇಳಿ ಇತರರೊಂದಿಗೆ ನಮ್ಮನ್ನು ಇಂದಿರಾನಗರಕ್ಕೆ ಅವರ ಕಾರಿನಲ್ಲಿ ಕರೆದುಕೊಂಡು ನನ್ನ ಮೊಬೈಲ್ ಫೋನ್ ಅನ್ನು ಫ್ರೆಟ್ ಮೋಡ್‌ಗೆ ಹಾಕಿ, ಹಾಟ್‌ಸ್ಪಾಟ್ ಮೂಲಕ ಇಂಟರ್‌ನೆಟ್ ಅನ್ನು ಕಲೆಕ್ಟ್ ಮಾಡಿರುತ್ತಾರೆ. ಅವರು ತಿಳಿಸಿದಂತೆ ನಾನು ರೋಷನ್ ಜೈನ್ ಎಂಬಾತನಿಗೆ ವಾಟ್ಸಾಪ್ ಕರೆ ಮಾಡಿಸಿ 03 ಕೋಟಿ ರೂಗಳನ್ನು ತಂದುಕೊಡುವಂತೆ ಹೇಳಿರುತ್ತೇನೆ. ನಂತರ ಅವರುಗಳು ನನ್ನನ್ನು ನಾನು ಕೆಲಸ ಮಾಡುವ ಸ್ಥಳಕ್ಕೆ ಕರೆದುಕೊಂಡು ಬಂದಿರುತ್ತಾರೆ. ನಂತರ ದಿನಾಂಕ:31-08-2024 ರಂದು ಬೆಳಿಗ್ಗೆ 10-30 ಗಂಟೆಗೆ ಸದರಿ ವ್ಯಕ್ತಿಗಳು ನನ್ನನ್ನು ಅವರ ಕಾರಿನಲ್ಲಿ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮತ್ತು ವಾಪಸ್ ಕರೆದುಕೊಂಡು ಬಂದಿರುತ್ತಾರೆ. ಅದೇ ರೀತಿ ನನ್ನ ಸ್ನೇಹಿತ ರೋಷನ್‌ಗೆ ಕರೆ ಮಾಡಿಸಿ ಹಣವನ್ನು ತಂದು ಕೊಡುವಂತೆ ಒತ್ತಾಯ ಮಾಡಿರುತ್ತಾರೆ. ಹಣವನ್ನು ತಂದು ಕೊಡಲು ತಡ ಮಾಡಿದ್ದರಿಂದ ನಮ್ಮ ಮೇಲೆ ಹಲ್ಲೆ ಮಾಡಿರುತ್ತಾರೆ ಎಂದು ತಿಳಿಸಿದೆ.