ಹುಬ್ಬಳ್ಳಿ, ಸೆಪ್ಟೆಂಬರ್ 11: ಕಾಂಗ್ರೆಸ್ ನಲ್ಲಿನ ಆಂತರಿಕ ವಿಚಾರ ದೊಡ್ಡ ಪ್ರಮಾಣದಲ್ಲಿ ಇದೆ. ಅದು ಬಹಿರಂಗ ಆಗಿದ್ದು ಅವರ ಕಚ್ಚಾಟದಿಂದಲೇ ಸರಕಾರ ಪತನ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು, ಮುಡಾ ಹಗರಣ ಆದ ಬಳಿಕ ಇದು ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಆಗಬೇಕು ಅಂತಾ ಸಾಕಷ್ಟು ಜನ ತಯಾರಿ ನಡೆಸಿದ್ದಾರೆ.
ಇದರಿಂದಲೇ ಸರ್ಕಾರ ಬೀಳುತ್ತದೆ, ಭಾರತೀಯ ಜನತಾ ಪಕ್ಷದವರು ಏನು ಮಾಡಬೇಕಾಗಿಲ್ಲ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆ ಪ್ರಸ್ತಾಪ ನಿಲ್ಲಿಸಲು ರಾಹುಲ್ ಗಾಂಧಿಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಹೇಳತಾ ಇದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಆವಾಗಿನಿಂದ ಯಾರು ಸಿಎಂ ಆಗಬೇಕು ಅಂತಾ. ಎರಡೂವರೆ ವರ್ಷಗಳ ಕಾಲ ಸಿಎಂ ಸಿದ್ಧರಾಮಯ್ಯ ಆಗಬೇಕು ಇನ್ನೂ ಎರಡೂವರೆ ವರ್ಷಗಳ ಕಾಲ ಡಿ ಕೆ ಶಿವಕುಮಾರ್ ಆಗಬೇಕು ಅಂತಾ ನಡೆಯುತ್ತಿದೆ. ಈ ಕುರಿತು ಆ ಪಕ್ಷದಲ್ಲಿ ಮಾತುಕತೆ ಆಗಿದೆ ಅಂತಾ ಮಾತು ಆರಂಭ ಆದವು. ಅಂದಿನಿಂದ ಇಂದಿನವರೆಗೂ ಗೊಂದಲ ನಡೆದೇ ಇದೆ ಎಂದರು.
ಡಿಸಿಎಂ, ರಾಹುಲ್ ಗಾಂಧಿ ಅಮೇರಿದಲ್ಲಿ ಭೇಟಿಯಾದ ವಿಚಾರವಾಗಿ ಮಾತನಾಡಿ, ಅಮೇರಿಕಾದಲ್ಲಿ ಭೇಟಿ ಆಗುವ ಅಗತ್ಯ ಏನು ಇತ್ತು ಎಂದ ಅವರು, ಕುಟುಂಬದ ಸಲುವಾಗಿ ರೆಸ್ಟ್ ಸಲುವಾಗಿ ಹೋಗಿದ್ದೇನೆ ಅಂತಾ ಹೇಳುತ್ತಾರೆ. ಆದರೆ ಅಮೇರಿಕಾದದಲ್ಲಿ ಭೇಟಿ ಆಗುವ ಅಗತ್ಯ ಏನು ಇತ್ತು. ದೆಹಲಿಯಲ್ಲಿಯೇ ಭೇಟಿ ಆಗಬಹುದು. ರಾಹುಲ್ ಗಾಂಧಿ ಹೋಗುವುದಕ್ಕೆ ಶಿವಕುಮಾರ್ ಅವರು ಹೋಗುವುದಕ್ಕೆ ಏನು ಇದೆ