ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಭಾವಿಸಿದ್ದಾರೆ. ಹಲ್ಲುಜ್ಜದೆ ನೀರು ಕುಡಿಯುವುದು ನಿಜವಾಗಿಯೂ ಉತ್ತಮವೇ? ನಿಮ್ಮಲ್ಲಿ ಈ ಪ್ರಶ್ನೆ ಕಾಡುತ್ತಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಹಲ್ಲುಜ್ಜುವ ಮೊದಲು ನೀರು ಕುಡಿಯುವುದ ಉತ್ತಮ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ನಿಮ್ಮ ಆಹಾರವನ್ನು ಸರಿಯಾಗಿ ಜೀರ್ಣಗೊಳಿಸುತ್ತದೆ. ಮಲಬದ್ಧತೆ, ಮೊಡವೆ, ಹೊಟ್ಟೆಯ ಸಮಸ್ಯೆ ಹಾಗೂ ಅಜೀರ್ಣ ಸಮಸ್ಯೆಯಂತಹ ಅನೇಕ ತೊಂದರೆಗಳನ್ನು ತಡೆಗಟ್ಟುತ್ತದೆ. ಇದಿಷ್ಟೇ ಅಲ್ಲದ, ಹಲ್ಲುಜ್ಜದೆ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಎಲ್ಲ ಕೊಳೆಗಳನ್ನು ತೆಗೆದುಹಾಕುತ್ತದೆ.
ಮುಂಜಾನೆ ನಿಮ್ಮ ದೇಹವನ್ನು ಹೈಡ್ರೇಟ್ ಮಾಡುವುದು ಬಹಳ ಮುಖ್ಯ. ನಿದ್ರೆಯ ಸಮಯದಲ್ಲಿ ಅಂದರೆ 7 ರಿಂದ 8 ಗಂಟೆಗಳ ನಡುವೆ ನಾವು ನೀರು ಕುಡಿಯುವುದಿಲ್ಲ. ಆದ್ದರಿಂದ ನೀವು ಬೆಳಿಗ್ಗೆ ಮಾಡಬೇಕಾದ ಮೊದಲು ಕೆಲಸವೆಂದರೆ ನೀರು ಕುಡಿಯಬೇಕು. ಆದ್ದರಿಂದ, ನಿಮ್ಮ ದೇಹವು ಮೊದಲು ಹೈಡ್ರೇಟ್ ಆಗುತ್ತದೆ.
ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಿಮಗೆ ಶೀತ ಮತ್ತು ಕೆಮ್ಮು ಬರುವುದಿಲ್ಲ. ಅಲ್ಲದೆ, ಕೂದಲು ಆರೋಗ್ಯಕರವಾಗಿ ಬೆಳೆಯುವಂತೆ ಮಾಡುತ್ತದೆ. ಬೆಳಿಗ್ಗೆ ನೀರು ಕುಡಿಯುವುದರಿಂದ ಅಧಿಕ ಬಿಪಿ ಮತ್ತು ಮಧುಮೇಹದಂತಹ ಕಾಯಿಲೆಗಳು ಬರುವುದಿಲ್ಲ. ಹಾಗೆಯೇ ಮುಂಜಾನೆ ನೀರು ಕುಡಿದರೆ ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಹೀಗಾಗಿ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವುದು ಉತ್ತಮ.
ಇನ್ನು ಒಣ ಬಾಯಿ ದುರ್ವಾಸನೆಯನ್ನು ಉಂಟುಮಾಡುತ್ತದೆ. ಇಂತಹ ಸಮಯದಲ್ಲಿ ಬೆಳಗ್ಗೆ ಬೇಗ ಎದ್ದು ನೀರು ಕುಡಿದರೆ ಹಲವಾರು ಸಮಸ್ಯೆಗಳು ದೂರವಾಗುತ್ತವೆ. ನೀವು ರಾತ್ರಿಯಿಡೀ ಮಲಗಿರುವಾಗ ಮೂತ್ರಪಿಂಡಗಳು ತಮ್ಮ ಕೆಲಸವನ್ನು ಮಾಡುತ್ತವೆ ಮತ್ತು ತ್ಯಾಜ್ಯವನ್ನು ಹೊರಹಾಕುತ್ತವೆ. ಎಚ್ಚರವಾದಾಗ ಹೆಚ್ಚು ನೀರು ಕುಡಿದರೆ ಆ ತ್ಯಾಜ್ಯಗಳೆಲ್ಲ ಮೂತ್ರದ ಮೂಲಕ ಹೊರಬರುತ್ತವೆ. ಬೆಳಗ್ಗೆ ಎದ್ದಾಗ ಮೂರು ಗಂಟೆಯೊಳಗೆ ಕನಿಷ್ಠ ಒಂದೂವರೆ ಲೀಟರ್ ನೀರು ಕುಡಿಯಿರಿ. ಕುಡಿಯುವಾಗ ಗ್ಯಾಪ್ ಕೊಟ್ಟು ಕುಡಿಯಿರಿ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.