: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರ ಭದ್ರತಾ ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿವೊಬ್ಬರ ತಲೆಯ ಮೇಲೆ ಪ್ಲೈಓವರ್ ಕಾಮಗಾರಿಯ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಉಪನಗರ ಠಾಣೆಯ ಸಿಬ್ಬಂದಿ ಎಎಸ್‌ಐ ನಬಿರಾಜ್ ದಾಯಣ್ಣವರ ಎಂಬಾತರೇ ಗಂಭೀರವಾಗಿ ಗಾಯಗೊಂಡಿದ್ದು, ಹಳೇ ಕೋರ್ಟ್ ಸರ್ಕಲ್ ಬಳಿಯಲ್ಲಿ ತೆರಳುತ್ತಿದ್ದಾಗ ಪ್ಲೈಓವರ್ ಕಾಮಗಾರಿ ನಡೆಸುತ್ತಿದ್ದ ಕಾರಣ ಮೇಲಿಂದ ಕಬ್ಬಿಣದ ರಾಡ್ ಏಕಾಏಕಿ ಬಿದ್ದಿದೆ.
ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ನಬಿರಾಜ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.